ಸುಬ್ರಹ್ಮಣ್ಯ: ಬಸ್ ಹತ್ತುವ ಆತುರದಲ್ಲಿ ಓಡಿ ಬಂದಾಗ ಬಸ್‌ಗೆ ಡಿಕ್ಕಿಯಾಗಿ ಯೇನೆಕಲ್ಲು ನಿವಾಸಿ ಮುತ್ಲಾಜೆಯ ಚೆನ್ನಪ್ಪ ಗೌಡ (75) ಮೃತಪಟ್ಟಿರುವ ಘಟನೆ ಯೇನೆಕಲ್ಲುವಿನಲ್ಲಿ ಸಂಭವಿಸಿದೆ.
ಪಂಜಕ್ಕೆ ತೆರಳಲೆಂದು ಯೇನೆಕಲ್ಲು ಬಸ್ ನಿಲ್ದಾಣದಲ್ಲಿ ಬಸ್‌ಗೆ ಕಾಯುತ್ತಿದ್ದ ಚೆನ್ನಪ್ಪ ಗೌಡ ಸುಬ್ರಹ್ಮಣ್ಯದಿಂದ ಪುತ್ತೂರಿನತ್ತ ತೆರಳುತ್ತಿದ್ದ ಬಸ್ ಬಂದಾಗ ಅದನ್ನು ಹತ್ತುಲೆಂದು ರಸ್ತೆ ದಾಟಿ ಬಸ್ ಕಡೆಗೆ ಓಡಿದ್ದಾರೆ. ಈ ವೇಳೆ ಬಸ್‌ಗೆ ಡಿಕ್ಕಿಯಾಗಿ ರಸ್ತೆಗೆ ಬಿದ್ದು ತಲೆ ಹಾಗೂ ಎದೆ ಭಾಗಕ್ಕೆ ಗಂಭೀರ ಗಾಯಗೊಂಡರು.
ಸ್ಥಳೀಯರು ಕೂಡಲೇ ಆಂಬುಲೆನ್ಸ್‌ನಲ್ಲಿ ಸುಬ್ರಹ್ಮಣ್ಯದ ಆಸ್ಪತ್ರೆಗೆ ಕೊಂಡೊಯ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಡಬ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಅಸುನೀಗಿದರು. ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.