ಕಾಸರಗೋಡು: ಬಾಲಕಿಯನ್ನು ಮನೆಗೆ ಕರೆಸಿಕೊಂಡು ದೌರ್ಜನ್ಯಕ್ಕೆತ್ನಿಸಿದ 70ರ ಹರೆಯದ ವೃದ್ಧನನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ.
ಪಡನ್ನ ಗಣೇಶ್‌ಮುಖ್ ನಿವಾಸಿ ಎ.ಸಿ.ಅಬೂಬಕ್ಕರ್ ಬಂಧಿತ. ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ 14ರ ಹರೆಯದ ಬಾಲಕಿಗೆ ತಿಂಡಿ ಕೊಡುವ ನೆಪದಲ್ಲಿ ಮನೆಗೆ ಕರೆಸಿ ಕಿರುಕುಳ ನೀಡಲೆತ್ನಿಸಿದ್ದು, ಅಲ್ಲಿಂದ ಪರಾರಿಯಾದ ಬಾಲಕಿ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾಳೆ.
ಮನೆಯವರು ನೀಡಿದ ಮಾಹಿತಿಯನ್ವಯ ಪೊಲೀಸರು ಆರೋಪಿಯನ್ನು ಆತನ ಮನೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.