ಬ್ರಹ್ಮಾವರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವಾಸಿಕ ಸಭೆಯಲ್ಲಿ ಡಾ.ಸುನೀತಾ ಶೆಟ್ಟಿ, ಎಚ್.ವಿ.ಇಬ್ರಾಹಿಂಪುರ, ಮೆಲ್ವಿನ್ ಬಾಂಜಿ, ಮಹೇಶ್ ಕೆ. ಇತರರು ಇದ್ದರು.
ಕೊಕ್ಕರ್ಣೆ: ಬ್ರಹ್ಮಾವರ ತಾಲೂಕಿನಲ್ಲಿ ವಿವಿಧ ಅನುಷ್ಠಾನ ಇಲಾಖೆೆಗಳ ಮೂಲಕ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನವಾಗುತ್ತಿದ್ದು, ಗೃಹಲಕ್ಷ್ಮಿ ಯೋಜನೆಯಡಿ 165 ಕೋಟಿ ರೂ., ಯುವನಿಧಿ ಯೋಜನೆಯಡಿ 1.26 ಕೋಟಿ ರೂ., ಗೃಹಜ್ಯೋತಿ ಯೋಜನೆಯಡಿ 57 ಕೋಟಿ ರೂ. ಅನುದಾನ ಫಲಾನುಭವಿಗಳನ್ನು ತಲುಪಿದೆ. ಪ್ರತಿ ಹಂತದಲ್ಲಿ ಅನುಷ್ಠಾನದ ಕುರಿತು ವಾಹಿತಿ ಹಾಗೂ ಮೇಲ್ವಿಚಾರಣಾ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಬ್ರಹ್ಮಾವರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಡಾ.ಸುನೀತಾ ಶೆಟ್ಟಿ ಹೇಳಿದರು.
ಬ್ರಹ್ಮಾವರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವಾಸಿಕ ಸಭೆ ಅಧ್ಯಕ್ಷತೆ ವಹಿಸಿ ವಾತನಾಡಿದರು.
ಕೋಟ ಗೋಳಿಯಂಗಡಿ ಭಾಗಕ್ಕೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಿರುವುದಕ್ಕೆ ಸದಸ್ಯರಿಂದ ಪ್ರಶಂಸೆ ವ್ಯಕ್ತವಾಯಿತು. ವಿದ್ಯಾರ್ಥಿಗಳು ಹಾಗೂ ನಾಗರಿಕರ ಹಿತದೃಷ್ಟಿಯಿಂದ ಈಗಾಗಲೇ ಹಲವು ವಾರ್ಗಗಳಲ್ಲಿ ಬಸ್ ಸಂಚಾರಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, ವಿಳಂಬ ಮಾಡದೆ ಬಸ್‌ಗಳನ್ನು ನೀಡಬೇಕು ಎಂದು ಸದಸ್ಯರಾದ ಗೋಪಿ ನಾಯ್ಕ, ರಮೇಶ್ ತಿಂಗಳಾಯ, ಶ್ರೀನಿವಾಸ ವಡ್ಡರ್ಸೆ, ರೇಖಾ ಸುವರ್ಣ ಮತ್ತಿತರರು ಆಗ್ರಹಿಸಿದರು.
ಸರ್ವೀಸ್ ರಸ್ತೆಯಲ್ಲಿ ಬಸ್ ಸಂಚಾರಕ್ಕೆ ಆಗ್ರಹ: ಸ್ಥಳೀಯ ವಾರ್ಗಗಳಲ್ಲಿ ಸಂಚರಿಸುವ ಸರ್ಕಾರಿ ಬಸ್‌ಗಳು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗಳಲ್ಲಿ ಸಾಗದಿರುವ ಕುರಿತು ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಕುಂದಾಪುರ ವ್ಯಾಪ್ತಿಯ ಸ್ಥಳೀಯ ಸಾರಿಗೆ ಬಸ್‌ಗಳು ಸರ್ವೀಸ್ ರಸ್ತೆಯಲ್ಲಿ ಕಡ್ಡಾಯವಾಗಿ ಸಂಚರಿಸಲು ಆದೇಶಿಸಬೇಕೆಂದು ಸದಸ್ಯರಾದ ದಿವಾಕರ ಗಾಣಿಗ, ರಾಮಕೃಷ್ಣ, ಸುರೇಶ ಪೂಜಾರಿ ಮತ್ತಿತರರು ಆಗ್ರಹಿಸಿದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು, ಬ್ರಹ್ಮಾವರ ತಾಪಂ ಇಒ ಎಚ್.ವಿ.ಇಬ್ರಾಹಿಂಪುರ, ಸಹಾಯಕ ಲೆಕ್ಕಾಧಿಕಾರಿ ಮೆಲ್ವಿನ್ ಬಾಂಜಿ, ಸಹಾಯಕ ನಿರ್ದೇಶಕ ಮಹೇಶ್ ಕೆ., ವಿವಿಧ ಅನುಷ್ಠಾನ ಇಲಾಖೆಗಳ ತಾಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ತಾಪಂ ಸಹಾಯಕ ನಿರ್ದೇಶಕ ಮಹೇಶ್ ಕೆ. ಸ್ವಾಗತಿಸಿ, ವಂದಿಸಿದರು.
ತಾಂತ್ರಿಕ ಕಾರಣದಿಂದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿರುವ ಫಲಾನುಭವಿಗಳನ್ನು ಆದ್ಯತೆ ಮೇಲೆ ಪರಿಶೀಲಿಸಿ, ಯೋಜನೆಯಡಿ ಸೇರ್ಪಡೆ ವಾಡುವ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ. ಯುವನಿಧಿ ಯೋಜನೆಗೆ ಹೆಚ್ಚಿನ ಫಲಾನುಭವಿಗಳನ್ನು ನೋಂದಾಯಿಸಲು ಕಾಲೇಜುಗಳಲ್ಲಿ ವಾಹಿತಿ ಕಾರ್ಯಾಗಾರ ನಡೆಸಬೇಕು.