ವಿದ್ಯಾರ್ಥಿಗಳಲ್ಲಿರಲಿ ಸಂಶೋಧನಾ ಆಸಕ್ತಿ

ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ನಡೆದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಟಿ. ಪ್ರಶಾಂತ್​ ಹೊಳ್ಳ ಮಾತನಾಡಿದರು. ಡಾ. ಚಂದ್ರಕಾಂತ್​ ಭಟ್​, ಡಾ. ರಾಘವೇಂದ್ರ ಎಲ್​., ಪ್ರೇಮನಾಥ್​, ಪ್ರೊ. ಟಿ. ಮುರುಗೇಶಿ ಇದ್ದರು.
ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ನಡೆದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಟಿ. ಪ್ರಶಾಂತ್​ ಹೊಳ್ಳ ಮಾತನಾಡಿದರು. ಡಾ. ಚಂದ್ರಕಾಂತ್​ ಭಟ್​, ಡಾ. ರಾಘವೇಂದ್ರ ಎಲ್​., ಪ್ರೇಮನಾಥ್​, ಪ್ರೊ. ಟಿ. ಮುರುಗೇಶಿ ಇದ್ದರು.
Published on

* ಗೌರವ ಕಾರ್ಯದರ್ಶಿ ಟಿ. ಪ್ರಶಾಂತ್​ ಹೊಳ್ಳ ಆಶಯ

* ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಕೌಶಲ ಕಾರ್ಯಾಗಾರ

ಉಡುಪಿ: ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆಯಾಗಿದೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಸಂಶೋಧನಾತ್ಮಕ ವಿಷಯ ಕುರಿತು ಆಸಕ್ತಿ ಇರಬೇಕು. ಆ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ತುಂಬ ಸಹಾಯಕಾರಿ ಆಗುತ್ತವೆ. ಭವಿಷ್ಯಕ್ಕೆ ಪೂರಕ ಮಾಹಿತಿ ಲಭಿಸುತ್ತವೆ ಎಂದು ಶ್ರೀ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಸಿಎ ಟಿ. ಪ್ರಶಾಂತ್​ ಹೊಳ್ಳ ತಿಳಿಸಿದರು.
ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಎ.ವಿ. ಸಭಾಂಗಣದಲ್ಲಿ ಕಾಲೇಜಿನ ಇತಿಹಾಸ ವಿಭಾಗ, ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಇತಿಹಾಸ ಅಧ್ಯಾಪಕರ ಸಂಘ (ಮಾನುಷ)ದ ಸಹಯೋಗದಲ್ಲಿ ಆಯೋಜಿಸಿದ್ದ 'ಸಂಶೋಧನಾ ಕೌಶಲ ಮತ್ತು ಅನುಭವಾತ್ಮಕ ಅಧ್ಯಯನ' ಎಂಬ ವಿಶ್ವವಿದ್ಯಾನಿಲಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರಕಾಂತ್​ ಭಟ್​ ಮಾತನಾಡಿ, ಜೀವನದಲ್ಲಿ ಯಾವುದೇ ಉನ್ನತ ಹಂತಕ್ಕೆ ತಲುಪಿದರೂ ನಮ್ಮ ಸಂಸತಿ ಮತ್ತು ಇತಿಹಾಸ ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿನ ಐಕ್ಯುಎಸಿ ಸಂಯೋಜಕ ಡಾ. ರಾಘವೇಂದ್ರ ಎಲ್​., ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಇತಿಹಾಸ ಉಪನ್ಯಾಸಕ ಪ್ರೇಮನಾಥ್​ ಸ್ವಾಗತಿಸಿದರು. ದಾಮೋದರ್​ ಶೆಟ್ಟಿಗಾರ್​ ವಂದಿಸಿದರು. ದ್ವಿತೀಯ ಬಿಎ ವಿದ್ಯಾರ್ಥಿ ದೇವರಾಜ್​ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿಗಳಿಗಾಗಿ ಗೋಷ್ಠಿ, ಉಪನ್ಯಾಸ

ಕಾರ್ಯಾಗಾರದ ಮೊದಲ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿ ಭಂಡಾರಕರ್ಸ್​ ಕಲಾ ಮತ್ತು ವಿಜ್ಞಾನ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ಕೆ.ಗೋಪಾಲ್​ ಅವರು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿವಿ ಸ್ನಾತಕ ಪದವಿಯ 4ನೇ ಸೆಮಿಸ್ಟರ್​ನ ಪಠ್ಯದಲ್ಲಿ ಸಂಶೋಧನಾತ್ಮಕ ಯೋಜನಾ ಕಾರ್ಯ ರಚಿಸಲು ತಿಳಿಸಿದ್ದರಿಂದ ಅದಕ್ಕೆ ಪೂರಕ ಮಾಹಿತಿ ನೀಡಿ 'ಸಂಶೋಧನೆ: ಒಂದು ಅವಲೋಕನ' ವಿಷಯ ಕುರಿತು ಸಮಗ್ರ ಮಾಹಿತಿ ನೀಡಿದರು. 2ನೇ ಗೋಷ್ಠಿಯಲ್ಲಿ ಮುಲ್ಕಿ ಸುಂದರರಾಮ್​ ಶೆಟ್ಟಿ ಕಾಲೇಜು ಶಿರ್ವದ ನಿವೃತ್ತ ಪ್ರಾಧ್ಯಾಪಕ ಹಾಗೂ ತುಳುನಾಡಿನ ಪ್ರಸಿದ್ಧ ಪುರಾತತ್ವ ಶಾಸ್ತ್ರಜ್ಞ ಪ್ರೊ. ಟಿ. ಮುರುಗೇಶಿ "ಕರಾವಳಿಯ ಇತಿಹಾಸದ ಸವಾಲು ಮತ್ತು ಸಂಶೋಧನೆಯ ಅವಕಾಶ' ಕುರಿತು ಉಪನ್ಯಾಸ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net