ಉಡುಪಿಯ ಐವೈಸಿ ಸಭಾಂಗಣದಲ್ಲಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಯಡಿ ಇಂಜಿನೀಯರಿಂಗ್ ವಿದ್ಯಾರ್ಥಿಗಳಿಗೆ 'ಶೈಕ್ಷಣಿಕ ಮಾರ್ಗದರ್ಶಿ ಶಿಬಿರ' ನಡೆಯಿತು. ಡಾ. ನಿರಂಜನ್ ಯು.ಸಿ., ಡಾ. ಪ್ರಶಾಂತ್ ಹೆಬ್ಬಾರ್, ಶ್ರೀಪಾದ ಹೆಬ್ಬಾರ್, ಕಿರಣ್ ನಾಯ್ಕ್, ಡಾ. ಮಂಜುಳಾ ಸಿ.ಬಿ., ದಿವ್ಯಶ್ರೀ ಬಿ., ಎಂ. ಗಂಗಾಧರ್ ರಾವ್, ವಿ.ಜಿ. ಶೆಟ್ಟಿ, ಯು.ಎಸ್. ರಾಜಗೋಪಾಲ ಆಚಾರ್ಯ, ಮುರಳಿ ಕಡೆಕಾರ್, ನಾರಾಯಣ ಎಂ. ಹೆಗಡೆ ಇದ್ದರು.
Published on:
Copied
Follow Us
*
ಇಂಜಿನೀಯರಿಂಗ್
ವಿದ್ಯಾರ್ಥಿಗಳಿಗೆ ಡಾ. ನಿರಂಜನ್ ಯು.ಸಿ. ಕಿವಿಮಾತು
* ಐವೈಸಿ ಸಭಾಂಗಣದಲ್ಲಿ ವಿದ್ಯಾಪೋಷಕ್ ಶೈಕ್ಷಣಿಕ ಸಮಾವೇಶ
ಉಡುಪಿ: ಮುಂದಿನ ಬದುಕು ಕಟ್ಟಿಕೊಳ್ಳಲು ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಜೀವನ ಮೌಲ್ಯಗಳೊಂದಿಗೆ ಕೌಶಲಗಳೂ ಅಗತ್ಯ. ಕಲಿಕೆಯಲ್ಲಿ ಶಿಸ್ತು, ಸಮಯಪ್ರಜ್ಞೆಯೂ ಸಹ ಅತ್ಯಗತ್ಯ. ತಾವು ಇಂಜಿನೀಯರಿಂಗ್ ವಿದ್ಯಾರ್ಥಿಗಳಾಗಿದ್ದರಿಂದ ಮುಂದಿನ ನಿರ್ದಿಷ್ಟ ಗುರಿಯೂ ಸ್ಪಷ್ಟವಾಗಿರಬೇಕು ಎಂದು ಉಡುಪಿ ಚಿಕತ್ರಕಲಾ ಮಂದಿರದ ನಿರ್ದೇಶಕ ಡಾ. ನಿರಂಜನ್ ಯು.ಸಿ. ಕಿವಿಮಾತು ಹೇಳಿದರು.
ಉಡುಪಿಯ ಐವೈಸಿ ಸಭಾಂಗಣದಲ್ಲಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಯಡಿ ಭಾನುವಾರ (ಆ.2) ಆಯೋಜಿಸಿದ್ದ ವಿವಿಧ ತರಗತಿಗಳಲ್ಲಿ ಇಂಜಿನೀಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳ 'ಶೈಕ್ಷಣಿಕ ಮಾರ್ಗದರ್ಶಿ ಶಿಬಿರ'ದಲ್ಲಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ. ಪ್ರಶಾಂತ್ ಹೆಬ್ಬಾರ್, ಶ್ರೀಪಾದ ಹೆಬ್ಬಾರ್, ಕಿರಣ್ ನಾಯ್ಕ್, ಡಾ. ಮಂಜುಳಾ ಸಿ.ಬಿ., ದಿವ್ಯಶ್ರೀ ಬಿ., ಯೋಗೀಶ್ ಚಂದ್ರಾಧರ್, ಪ್ರತಿಮಾ ಪಾಂಗಣ್ಣಾಯ, ರಮ್ಯಾ ದೇಶಪಾಂಡೆ ಇತರರು ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಜೀವನ ಮೌಲ್ಯಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಸಂಸ್ಥೆಯ ಉಪಾಧ್ಯಕ್ಷರಾದ ವಿ.ಜಿ. ಶೆಟ್ಟಿ, ಯು.ಎಸ್. ರಾಜಗೋಪಾಲ ಆಚಾರ್ಯ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಸಹಕರಿಸಿದರು.
ಸಂಸ್ಥೆಯ ಸದಸ್ಯರಾದ ವಿಜಯಕುಮಾರ್ ಮುದ್ರಾಡಿ, ಅನಂತರಾಜ ಉಪಾಧ್ಯ, ಅಶೋಕ್ ಎಂ., ಎನ್. ರಾಮ ಭಟ್, ಪ್ರಭಾಕರ್ ಭಂಡಿ, ವಸಂತ್ ಆರ್. ಮಂಜುನಾಥ ಪಾಲ್ಗೊಂಡಿದ್ದರು.
ವಿದ್ಯಾಪೋಷಕ್ನ 227 ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದರು. ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಸಹಾಯಧನ ನವೀಕರಣ ಅರ್ಜಿ ನಮೂನೆ ವಿತರಿಸಲಾಯಿತು.