ವಿದ್ಯೆಯೊಂದಿಗೆ ಬದುಕಲು ಬೇಕು ವಿವಿಧ ಕೌಶಲ

ಉಡುಪಿಯಲ್ಲಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್​ನ ಫಲಾನುಭವಿಗಳಿಗೆ ಆಯೋಜಿಸಿದ್ದ ಶೈಕ್ಷಣಿಕ ಮಾರ್ಗದರ್ಶನ ಶಿಬಿರದಲ್ಲಿ ಗೋಪಾಲಕೃಷ್ಣ ಭಟ್​ ಅವರನ್ನು ಗೌರವಿಸಲಾಯಿತು. ಪ್ರೊ. ಕೆ.ಸದಾಶಿವ ರಾವ್​, ನಾರಾಯಣ ಎಂ ಹೆಗಡೆ, ವಿದ್ಯಾಪ್ರಸಾದ್​, ಯು.ವಿಶ್ವನಾಥ್​ ಶೆಣೈ, ಪವಿತ್ರಾ, ಮುರಳಿ ಕಡೆಕಾರ್​ ಇತರರಿದ್ದರು.
ಉಡುಪಿಯಲ್ಲಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್​ನ ಫಲಾನುಭವಿಗಳಿಗೆ ಆಯೋಜಿಸಿದ್ದ ಶೈಕ್ಷಣಿಕ ಮಾರ್ಗದರ್ಶನ ಶಿಬಿರದಲ್ಲಿ ಗೋಪಾಲಕೃಷ್ಣ ಭಟ್​ ಅವರನ್ನು ಗೌರವಿಸಲಾಯಿತು. ಪ್ರೊ. ಕೆ.ಸದಾಶಿವ ರಾವ್​, ನಾರಾಯಣ ಎಂ ಹೆಗಡೆ, ವಿದ್ಯಾಪ್ರಸಾದ್​, ಯು.ವಿಶ್ವನಾಥ್​ ಶೆಣೈ, ಪವಿತ್ರಾ, ಮುರಳಿ ಕಡೆಕಾರ್​ ಇತರರಿದ್ದರು.
Published on

ತ್ರಿಶಾ ವಿದ್ಯಾಸಂಸ್ಥೆಗಳ ಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್​ ಅನಿಸಿಕೆ

* ವಿದ್ಯಾಪೋಷಕ್​ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶಿ ಶಿಬಿರ

ಉಡುಪಿ: ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಯೊಂದಿಗೆ ಕೌಶಲಗಳನ್ನೂ ಕಲಿಯಬೇಕು. ಕಠಿಣ ಪರಿಶ್ರಮ ರೂಢಿಸಿಕೊಳ್ಳಬೇಕು. ಕೃತಜ್ಞತೆ, ಗುರಿ, ಜೀವನದ ಉದ್ದೇಶ ಇವುಗಳನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಅಧ್ಯಯನ ಮಾಡಬೇಕು. ಉದ್ಯೋಗ ಗಳಿಸಿ ಬದುಕು ಕಟ್ಟಿಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಜೀವನ ಸಾಗಿಸಬೇಕು ಎಂದು ತ್ರಿಶಾ ವಿದ್ಯಾಸಂಸ್ಥೆಗಳ ಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್​ ಸಲಹೆ ನೀಡಿದರು.
ಉಡುಪಿಯ ಐವೈಸಿ ಸಭಾಂಗಣದಲ್ಲಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್​ ಫಲಾನುಭವಿಗಳಾದ ಪ್ರಥಮ ಪದವಿ, ಸ್ನಾತಕೋತ್ತರ, ನರ್ಸಿಂಗ್​, ಕಾನೂನು ಶಾಸ್ತ್ರ ಮತ್ತು ಮೆಡಿಕಲ್​ನ ವಿವಿಧ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಭಾನುವಾರ (ಜು.26) ಆಯೋಜಿಸಿದ್ದ ಒಂದು ದಿನದ ಮಾರ್ಗದರ್ಶನ ಶಿಬಿರದಲ್ಲಿ ಮಾತನಾಡಿದರು.
ವಿದ್ಯೋದಯ ಶಾಲೆಯಲ್ಲಿ ಪ್ರಸ್ತುತ ಉಪನ್ಯಾಸಕಿಯಾಗಿರುವ ವಿದ್ಯಾಪೋಷಕ್​ ಯೋಜನೆಯ ಫಲಾನುಭವಿ ಪವಿತ್ರಾ ಹಾಗೂ ಪ್ರತಿಮಾ ಪಾಂಗಣ್ಣಾಯ ಮಾತನಾಡಿ, ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.
ಪ್ರೊ. ಕೆ.ಸದಾಶಿವ ರಾವ್​, ನಾರಾಯಣ ಎಂ ಹೆಗಡೆ, ವಿದ್ಯಾಪ್ರಸಾದ್​, ಯು.ವಿಶ್ವನಾಥ್​ ಶೆಣೈ, ಯು.ಎಸ್​. ರಾಜಗೋಪಾಲ ಆಚಾರ್ಯ, ಉಮೇಶ್​ ಭಟ್​, ಎನ್​. ರಾಮ ಭಟ್​, ಅನಂತ ರಾಜ ಉಪಾಧ್ಯ, ವಸಂತ ಆರ್​., ವಿಶ್ವನಾಥ್​ ಉಪಸ್ಥಿತರಿದ್ದರು.
ಸಂಸ್ಥೆಯ ಉಪಾಧ್ಯಕ್ಷ ವಿ.ಜಿ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್​ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಿದರು.
ವಿದ್ಯಾಪೋಷಕ್​ನ 240 ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದರು. ಪಾಲ್ಗೊಂಡಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಸಹಾಯಧನ ನವೀಕರಣದ ಅರ್ಜಿ ನಮೂನೆ ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net