ವಿದ್ಯಾರ್ಥಿಗಳಿಗೆ ಇರಬೇಕು ಸಾಧನೆಯ ಗುರಿ

ಹಿರಿಯಡಕ ಕರ್ನಾಟಕ ಪಬ್ಲಿಕ್​ ಸ್ಕೂಲ್​ನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ನೀಡಿದ ಐಡಾ ಡಿಸೋಜಾ ಅವರನ್ನು ಗೌರವಿಸಲಾಯಿತು. ಶೈಲಜಾ  ಜೆನ್ನಿ, ಸಂಜನಾ ರೈ, ಸುಮನಾ ರಾವ್​, ಎಚ್​. ಶ್ರೀನಿವಾಸ ರಾವ್​, ಶರತ್​ಚಂದ್ರ, ಸರೋಜಾ ನಾಯಕ್​, ಮಂಜುನಾಥ್​ ಭಟ್​, ಪ್ರಕಾಶ್​ ಪ್ರಭು ಇದ್ದರು.
ಹಿರಿಯಡಕ ಕರ್ನಾಟಕ ಪಬ್ಲಿಕ್​ ಸ್ಕೂಲ್​ನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ನೀಡಿದ ಐಡಾ ಡಿಸೋಜಾ ಅವರನ್ನು ಗೌರವಿಸಲಾಯಿತು. ಶೈಲಜಾ ಜೆನ್ನಿ, ಸಂಜನಾ ರೈ, ಸುಮನಾ ರಾವ್​, ಎಚ್​. ಶ್ರೀನಿವಾಸ ರಾವ್​, ಶರತ್​ಚಂದ್ರ, ಸರೋಜಾ ನಾಯಕ್​, ಮಂಜುನಾಥ್​ ಭಟ್​, ಪ್ರಕಾಶ್​ ಪ್ರಭು ಇದ್ದರು.
Published on

* ಪ್ರಾಧ್ಯಾಪಕಿ ಐಡಾ ಡಿಸೋಜಾ ಕಿವಿಮಾತು

* 'ನಾನು ಯಾರು? ಉತ್ತರ ಬೇಕಾಗಿದೆ' ಉಪನ್ಯಾಸ

ಉಡುಪಿ: ವಿದ್ಯಾರ್ಥಿ ದೆಸೆಯಲ್ಲಿಯೇ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯ, ಆಸಕ್ತಿ ಮತ್ತು ದೌರ್ಬಲ್ಯ ಗುರುತಿಸಿಕೊಳ್ಳುವುದು ಅತ್ಯಗತ್ಯ. ಬೇರೆಯವರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎನ್ನುವುದಕ್ಕಿಂತ ನಮ್ಮೊಳಗಿನ ನೈಜ ಶಕ್ತಿ ಮತ್ತು ಉದ್ದೇಶ ತಿಳಿದಿರಬೇಕು. ಮುಂದಿನ ಎರಡು ವರ್ಷದಲ್ಲಿ ಹಾಗೂ ಹದಿನೈದು ವರ್ಷಗಳಲ್ಲಿ ನಾನೇನು ಸಾಧಿಸಬೇಕೆಂದು ಈಗಿನಿಂದಲೇ ಗುರಿ ರೂಪಿಸಿಕೊಳ್ಳಬೇಕು ಎಂದು ಮಣಿಪಾಲದ ಪ್ರಸನ್ನ ಸ್ಕೂಲ್​ ಆಫ್​ ಪಬ್ಲಿಕ್​ ಹೆಲ್ತ್​ನ ಸಹಾಯಕ ಪ್ರಾಧ್ಯಾಪಕಿ ಐಡಾ ಡಿಸೋಜಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಉಡುಪಿ ತಾಲೂಕಿನ ಹಿರಿಯಡಕ ಕರ್ನಾಟಕ ಪಬ್ಲಿಕ್​ ಸ್ಕೂಲ್​ನ ಡಾ.ಚಂದಯ್ಯ ಹೆಗ್ಡೆ ಸ್ಮಾರಕ ಸಭಾಭವನದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ (ರಿ.) ಹಾಗೂ ಅಮೃತ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಶನಿವಾರ (ಜೂ.20) ಸರಣಿಯ 10ನೇ ಶೈಕ್ಷಣಿಕ ಅರಿವು ಕಾರ್ಯಕ್ರಮದಲ್ಲಿ 'ನಾನು ಯಾರು? ಉತ್ತರ ಬೇಕಾಗಿದೆ' ವಿಷಯ ಕುರಿತು ಉಪನ್ಯಾಸ ನೀಡಿದರು.
ಐಡಾ ಡಿಸೋಜಾ ವಿದ್ಯಾರ್ಥಿಗಳಿಗೆ  ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಇಷ್ಟ ಮತ್ತು ಕಷ್ಟಗಳ ಬಗ್ಗೆ ಬರೆಯಲು ಪ್ರೇರೇಪಕ ಚಟುವಟಿಕೆ ನಡೆಸಲಾಯಿತು. 
ಯುನೈಟೆಡ್​ ಇಂಡಿಯಾ ಇನ್ಶೂರೆನ್ಸ್​ನ ನಿವೃತ್ತ ಅಧಿಕಾರಿ ಶೈಲಜಾ  ಜೆನ್ನಿ, ಸ್ನೇಹ ಯೋಗ ವೃಂದದ ಸಂಜನಾ ರೈ, ಸಂಸ್ಥೆಯ ಹಳೆಯ ವಿದ್ಯಾರ್ಥಿ ಹಾಗೂ ಅಮೆರಿಕ ನಿವಾಸಿ ಸುಮನಾ ರಾವ್​ ಮಾತನಾಡಿದರು.
ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಚ್​. ಶ್ರೀನಿವಾಸ ರಾವ್​, ಕಾರ್ಯದರ್ಶಿ ಶರತ್​ಚಂದ್ರ, ಸದಸ್ಯೆ ಸರೋಜಾ ನಾಯಕ್​, ಪ್ರಾಂಶುಪಾಲ ಮಂಜುನಾಥ್​ ಭಟ್​ ಉಪಸ್ಥಿತರಿದ್ದರು. ಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು ಪಾಲ್ಗೊಂಡಿದ್ದರು.
ಉಪ ಪ್ರಾಂಶುಪಾಲ ಪ್ರಕಾಶ್​ ಪ್ರಭು ಸ್ವಾಗತಿಸಿದರು. ಅಮೃತ ಮಹೋತ್ಸವ ಸಮಿತಿಯ ಕಾರ್ಯದರ್ಶಿ ನಾಗರಾಜೇಂದ್ರ ಎಂ.ಆರ್​. ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net