ಸಮಾಜದ ಅಭಿವೃದ್ಧಿಗೆ ಶಿಕ್ಷಣ ಅಡಿಪಾಯ

ಕುಂದಾಪುರದ ಎಲ್.ಜಿ. ಫೌಂಡೇಶನ್ ವತಿಯಿಂದ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಹಾಗೂ ಸಾಧಕರ ಸನ್ಮಾನ ಸಮಾರಂಭ ನಡೆಯಿತು. ಪ್ರಮುಖರಾದ ನಂದಿ ದೇವಾಡಿಗ, ನಾಗರಾಜ್ ಪಡುಕೋಣೆ, ಡಾ.ಮಧುಕರ್ ದೇವಾಡಿಗ, ಜನಾರ್ದನ ದೇವಾಡಿಗ ಉಪ್ಪುಂದ, ಲಚ್ಚು ದೇವಾಡಿಗ, ಕುಸುಮಾ ದೇವಾಡಿಗ, ಗುರುಕೃತಿಕ್ ದೇವಾಡಿಗ ಉಪಸ್ಥಿತರಿದ್ದರು.
ಕುಂದಾಪುರದ ಎಲ್.ಜಿ. ಫೌಂಡೇಶನ್ ವತಿಯಿಂದ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಹಾಗೂ ಸಾಧಕರ ಸನ್ಮಾನ ಸಮಾರಂಭ ನಡೆಯಿತು. ಪ್ರಮುಖರಾದ ನಂದಿ ದೇವಾಡಿಗ, ನಾಗರಾಜ್ ಪಡುಕೋಣೆ, ಡಾ.ಮಧುಕರ್ ದೇವಾಡಿಗ, ಜನಾರ್ದನ ದೇವಾಡಿಗ ಉಪ್ಪುಂದ, ಲಚ್ಚು ದೇವಾಡಿಗ, ಕುಸುಮಾ ದೇವಾಡಿಗ, ಗುರುಕೃತಿಕ್ ದೇವಾಡಿಗ ಉಪಸ್ಥಿತರಿದ್ದರು.
Published on
ಕುಂದಾಪುರ: ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶ್ರಮ, ಸತ್ಯ, ನಿಷ್ಠೆ ಮತ್ತು ಪರಿಶ್ರಮ ಮಹತ್ವಪೂರ್ಣವಾದುದು. ಸಮಾಜದ ಅಭಿವೃದ್ಧಿಗೆ ಶಿಕ್ಷಣ ಅಡಿಪಾಯವಾಗಿದ್ದು, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ಮತ್ತು ಆತ್ಮವಿಶ್ವಾಸ ಮೂಡಿಸುತ್ತವೆ ಎಂದು ಹೆಮ್ಮಾಡಿಯ ನಿವೃತ್ತ ಮುಖ್ಯಶಿಕ್ಷಕ ನಂದಿ ದೇವಾಡಿಗ ಹೇಳಿದರು.
ಕುಂದಾಪುರದ ಎಲ್.ಜಿ. ಫೌಂಡೇಶನ್ ವತಿಯಿಂದ ಹೆಮ್ಮಾಡಿಯ ಹೊಸಕಳಿಯ ಬೊಬ್ಬರ್ಯ ದೈವಸ್ಥಾನದ ಸಭಾಂಗಣದಲ್ಲಿ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಹಾಗೂ ಸಾಧಕರ ಸನ್ಮಾನ ಸಮಾರಂಭ-2026 ಉದ್ಘಾಟಿಸಿ ಮಾತನಾಡಿದರು.
ಎಲ್.ಜಿ. ಫೌಂಡೇಶನ್ ವ್ಯವಸ್ಥಾಪಕ ಟ್ರಸ್ಟಿ ನಾಗರಾಜ್ ಪಡುಕೋಣೆ ಅಧ್ಯಕ್ಷತೆ ವಹಿಸಿದ್ದರು. ಸಾಧಕ ವಿದ್ಯಾರ್ಥಿಗಳಾದ ರಿಷಿಕಾ ದೇವಾಡಿಗ, ಶ್ರಾವ್ಯ ಜಿ.ದೇವಾಡಿಗ, ವರ್ಷಾ ಕೆ.ದೇವಾಡಿಗ ಮತ್ತು ರಶ್ಮಿತಾ ರವಿ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ಹಾಗೂ ಆರ್ಥಿಕವಾಗಿ ನೆರವು ಅಗತ್ಯವಿದ್ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಉಡುಪಿಯ ವೈದ್ಯ ಡಾ.ಮಧುಕರ್ ದೇವಾಡಿಗ ಶುಭಾಶಂಸನೆಗೈದರು. ಮುಂಬೈ ಉದ್ಯಮಿ ಜನಾರ್ದನ ದೇವಾಡಿಗ ಉಪ್ಪುಂದ, ಎಲ್.ಜಿ. ಫೌಂಡೇಶನ್ ಟ್ರಸ್ಟಿಗಳಾದ ಲಚ್ಚು ದೇವಾಡಿಗ, ಕುಸುಮಾ ದೇವಾಡಿಗ, ಗುರುಕೃತಿಕ್ ದೇವಾಡಿಗ, ಕುಂದಾಪುರ ದೇವಾಡಿಗ ಸಂಘದ ಅಧ್ಯಕ್ಷ ನಾಗರಾಜ್ ರಾಯಪ್ಪನಮಠ, ಹೊಸಕಳಿಯ ದೈವದ ಪಾತ್ರಿ ಚಿಕ್ಕಯ್ಯ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಪುರುಷೋತ್ತಮ ದಾಸ್ ಸ್ವಾಗತಿಸಿದರು. ನಿಹಾರಿಕ ದೇವಾಡಿಗ ಪ್ರಾರ್ಥಿಸಿದರು. ರಾಘವೇಂದ್ರ ದೇವಾಡಿಗ ವಂದಿಸಿದರು. ಬೈಂದೂರಿನ ರಾಮ ದೇವಾಡಿಗ ಕಾರ್ಯಕ್ರಮ ಸಂಯೋಜಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net