ವಂಡ್ಸೆ ಗ್ರಾಪಂ ಉಪಾಧ್ಯಕ್ಷ ಗೋವರ್ಧನ್ ಜೋಗಿ ಅಧ್ಯಕ್ಷತೆ ವಹಿಸಿದ್ದರು. ನಿರಾಮಯ ಸೊಸೈಟಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ಡಾ.ಅತುಲ್ ಕುಮಾರ್ ಶೆಟ್ಟಿ, ಬೈಂದೂರು ಉತ್ಸವ ಸಮಿತಿ ಸಂಚಾಲಕ ಶ್ರೀಗಣೇಶ ಗಾಣಿಗ, ಮಾರ್ಗದರ್ಶಿ ಅಧಿಕಾರಿ ರವೀಂದ್ರ, ಗ್ರಾಪಂ ಸದಸ್ಯರಾದ ಶಶಿಕಲಾ ಎಸ್.ವಂಡ್ಸೆ, ಸುಬ್ಬು, ಸ್ಥಳೀಯ ಬಿಜೆಪಿ ಮುಖಂಡರಾದ ದೀಪಕ ಕುಮಾರ್ ಶೆಟ್ಟಿ, ಪ್ರಮುಖರಾದ ವಿ.ಕೆ.ಶಿವರಾಮ ಶೆಟ್ಟಿ, ಡಾ.ಎಂ.ಜಿ.ರಾಮ, ಶಂಕರ್, ಶಂಕರ ಶೆಟ್ಟಿ, ಸುಲೋಚನಾ, ಬೃಂದಾವನ ಸಂಜೀವಿನಿ ಸಂಘ ಅಧ್ಯಕ್ಷೆ ಸಲ್ಮಾ, ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು. ಪಿಡಿಒ ಪೂರ್ಣಿಮಾ ಶೇಟ್ ಸ್ವಾಗತಿಸಿದರು. ಆಶಾ ವಂದಿಸಿದರು. ವಾಣಿಶ್ರೀ ನಿರೂಪಿಸಿದರು.