ಧರ್ಮಸ್ಥಳ ಗ್ರಾಮಾಭಿವೃದ್ಧಿ ಪ್ರಗತಿ ಬಂಧು ಸ್ವಸಹಾಯ ಸಂಘದ ಕುರಿಯಾಳ ಒಕ್ಕೂಟದ ಪದಗ್ರಹಣ ಸಮಾರಂಭದಲ್ಲಿ ಜಿಲ್ಲಾ ನಿರ್ದೇಶಕ ದಿನೇಶ್ ಡಿ. ಮಾತನಾಡಿದರು. ಪ್ರಮುಖರಾದ ರೋನಾಲ್ಡ್ ಡಿಸೋಜ, ನವಿನ್ ಪೂಜಾರಿ, ಹರೀಶ್ ಶೆಟ್ಟಿ ಮತ್ತಿತರರಿದ್ದರು.
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಜನರಲ್ಲಿ ಉಳಿತಾಯ ಮನೋಭಾವನೆ ಮೂಡಿದೆ. ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘದಿಂದ ಜನರಲ್ಲಿ ಸ್ವಾಭಿಮಾನದ ಬದುಕಿನ ಜತೆಗೆ ಆರ್ಥಿಕ ಶಕ್ತಿ ಹಾಗೂ ಧೈರ್ಯ ಬಂದಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದ.ಕ.ಜಿಲ್ಲಾ ನಿರ್ದೇಶಕ ದಿನೇಶ್ ಡಿ. ಹೇಳಿದರು.
ಕುರಿಯಾಳ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬಿ.ಸಿ.ರೋಡು ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘದ ಕುರಿಯಾಳ ಒಕ್ಕೂಟದ ಪದಗ್ರಹಣ ಸಮಾರಂಭದಲ್ಲಿ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರಿಸಿ ಮಾತನಾಡಿದರು.
ಶುಭ ಸಮೂಹ ಸಂಸ್ಥೆಯ ಚಂದ್ರಾವತಿ ಸೇಸಪ್ಪ ಕೋಟ್ಯಾನ್ ಉದ್ಘಾಟಿಸಿದರು. ಅಮ್ಟಾಡಿ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸದಸ್ಯರನ್ನು, ನೂತನ ಸದಸ್ಯರನ್ನು ಅಭಿನಂದಿಸಲಾಯಿತು. ಒಕ್ಕೂಟದ ಮಾಜಿ ಅಧ್ಯಕ್ಷರು, ನೂತನ ಪದಾಧಿಕಾರಿಗಳು, ಯೋಜನೆ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಯನ್ನು ಗೌರವಿಸಲಾಯಿತು. ಉತ್ತಮ ಸಂಘಗಳಿಗೆ ಬ್ಯಾಗ್, ಅದೃಷ್ಟ ಚೀಟಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ರೋನಾಲ್ಡ್ ಡಿಸೋಜ, ನೂತನ ಅಧ್ಯಕ್ಷ ನವಿನ್ ಪೂಜಾರಿ, ಅಮ್ಟಾಡಿ ಗ್ರಾಪಂ ಮಾಜಿ ಅಧ್ಯಕ್ಷ ಹರೀಶ್ ಶೆಟ್ಟಿ, ಉದ್ಯಮಿ ರತ್ನಾಕರ ಪೂಜಾರಿ, ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ., ನಿಕಟಪೂರ್ವ ಅಧ್ಯಕ್ಷೆ ಧನಲಕ್ಷ್ಮೀ ಉಪಸ್ಥಿತರಿದ್ದರು.
ಯೋಜನೆ ಮೇಲ್ವಿಚಾರಕ ಗಿರೀಶ್ ಸ್ವಾಗತಿಸಿದರು. ಸೇವಾಪ್ರತಿನಿಧಿ ಕವಿತಾ ವರದಿ ವಾಚಿಸಿದರು, ಜತೆ ಕಾರ್ಯದರ್ಶಿ ಯತೀಶ್ ಕುಕ್ಕಾಜೆ ವಂದಿಸಿದರು. ಸತೀಶ್ ಪೂಜಾರಿ ಪಡು ನಿರೂಪಿಸಿದರು.