ಹಳೇ ವಿದ್ಯಾರ್ಥಿಗಳಿಂದ ಶಿಕ್ಷಣ ಸಂಸ್ಥೆ ಉಳಿವು

 ಪಡುಬಿದ್ರಿ ಗಣಪತಿ ಪ್ರೌಢಶಾಲಾ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ನಿವೇದಿತಾ, ವಂಶಿ ಕರ್ಕೇರ, ಗ್ರೀಷ್ಮಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಸುದರ್ಶನ ವೈ.ಎಸ್., ಅನಂತಪಟ್ಟಾಭಿರಾವ್, ಪಿ.ಭವಾನಿಶಂಕರ ಹೆಗ್ಡೆ, ನವೀನಚಂದ್ರ ಶೆಟ್ಟಿ, ರಮಾಕಾಂತ ರಾವ್, ರಾಘವೇಂದ್ರ ರಾವ್, ಅಶೋಕ್, ಕಸ್ತೂರಿ ಇದ್ದರು.

Published on
ಪಡುಬಿದ್ರಿ: ಶಿಕ್ಷಣ ಸಂಸ್ಥೆ ಉಳಿಯಲು ಉತ್ತಮ ಬೋಧಕರು ಬೇಕು. ಹಾಗೆಯೇ ಶಾಲಾ ಆಡಳಿತ ಮಂಡಳಿ, ಇಲಾಖೆ ಜತೆಗೆ ಪ್ರಮುಖವಾಗಿ ಹಳೇ ವಿದ್ಯಾರ್ಥಿಗಳು ಅಗತ್ಯ ಎಂದು ಅದಮಾರು ಪೂರ್ಣಪ್ರಜ್ಞ ಸಮೂಹ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಜತೆ ಕಾರ್ಯದರ್ಶಿ ಸುದರ್ಶನ್ ರಾವ್ ವೈ.ಎಸ್. ಹೇಳಿದರು.
ಪಡುಬಿದ್ರಿ ಗಣಪತಿ ಪ್ರೌಢಶಾಲಾ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಹಳೇ ವಿದ್ಯಾರ್ಥಿ ಪೃಥ್ವಿರಾಜ್ ಹೆಗ್ಡೆ ಪ್ರಾಯೋಜಕತ್ವದ ವಿದ್ಯಾರ್ಥಿವೇತನ ಹಾಗೂ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ನಿವೇದಿತಾ, ವಂಶಿ ಕರ್ಕೇರ, ಗ್ರೀಷ್ಮಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆ ಶೇ.100 ಫಲಿತಾಂಶ ದಾಖಲಿಸಲು ಕಾರಣಕರ್ತರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರನ್ನು ಗೌರವಿಸಲಾಯಿತು.
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಆನುವಂಶಿಕ ಮೊಕ್ತೇಸರ ಪಿ.ಭವಾನಿಶಂಕರ್ ಹೆಗ್ಡೆ, ನಿವೃತ್ತ ಮುಖ್ಯಶಿಕ್ಷಕ ರಾಘವೇಂದ್ರ ನಾವಡ, ಹಳೇ ವಿದ್ಯಾರ್ಥಿ ಸಂಘ ನಿರ್ದೇಶಕ ಅನಂತಪಟ್ಟಾಭಿ ರಾವ್, ಗೌರವಾಧ್ಯಕ್ಷ ಸದಾಶಿವ ಆಚಾರ್, ಕೋಶಾಧಿಕಾರಿ ಕಸ್ತೂರಿ ರಾಮಚಂದ್ರ, ಗಣಪತಿ ಪ್ರೌಢಶಾಲೆ ಹಿರಿಯ ಶಿಕ್ಷಕ ರಾಘವೇಂದ್ರ ರಾವ್, ಎಸ್‌ಬಿವಿಪಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಅಶೋಕ್ ಉಪಸ್ಥಿತರಿದ್ದರು.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನ್‌ಚಂದ್ರ ಜೆ.ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕೃತರ ಪಟ್ಟಿಯನ್ನು ವಸಂತಿ ಹಾಗೂ ಭಾರತಿ ವಾಚಿಸಿದರು. ನಮಿತಾ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರಮಾಕಾಂತ್ ರಾವ್ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net