ಆರೋಗ್ಯ, ಶಿಕ್ಷಣ ಕ್ಷೇತ್ರದ ಸಾಧನೆ ಮೂಲಕ ನಿರಂತರ ದೇಶದ ಗಮನ ಸೆಳೆಯುವ ಉಡುಪಿ, 'ಸ್ವಚ್ಛ ನಗರ' ಎಂಬ ಹೆಗ್ಗಳಿಕೆಯನ್ನೂ ಪಡೆದಿತ್ತು. ಆದರೆ, ಕೆಲ ವರ್ಷದಿಂದ ನಗರದ ಯಾವುದೇ ವಾರ್ಡ್ಗೆ ಹೋದರೂ ಅಲ್ಲಿನ ರಸ್ತೆಯ ಅಕ್ಕಪಕ್ಕದಲ್ಲಿ ಜನರೇ ಎಸೆಯುವ ಕಸದ ರಾಶಿ ಗೋಚರಿಸುತ್ತಿದ್ದು, ಹೆಗ್ಗಳಿಕೆಗೆ ಮಸಿ ಬಳಿಯುತ್ತಿದೆ.