ಬುಧವಾರ ಸಂಜೆ ಅತಿಯಾದ ವೇಗದಲ್ಲಿ ಜೀಪು ಚಲಾಯಿಸತ್ತಿದ್ದ. ಅಲ್ಲದೆ ಜೀಪಿನ ಒಂದು ಟಯರ್ ಹಾನಿಗೀಡಾದ ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿ ನಾಗರಿಕರು ಪರಪ್ಪ ಶಾಲೆ ಸಮೀಪ ಜೀಪನ್ನು ತಡೆದು ನಿಲ್ಲಿಸಿದ್ದರು. ಜೀಪಿನಿಂದ ಹೊರಗಿಳಿದ ಚಾಲಕ ಮದ್ಯದ ಅಮಲಿನಿಂದ ರಸ್ತೆಯಲ್ಲಿ ಕುಸಿದುಬಿದ್ದಿದ್ದ. ಬಳಿಕ ಸಾರ್ವಜನಿಕರು ನೀಡಿದ ಮಾಹಿತಿಯಂತೆ ಪೊಲೀಸರು ಆಗಮಿಸಿ ವಶಕ್ಕೆ ಪಡೆದಿರು.