ಕಾರು ಅಪಘಾತಗೈದ ಮದ್ಯಪಾನಿ ಚಾಲಕ ಬಂಧನ

ಕಾರ್ಕಳ ಮುಡಾರು ನಿವಾಸಿ ಸಮೇಗ್ದ್​ ಎಲ್​. ಜೆ.
ಕಾರ್ಕಳ ಮುಡಾರು ನಿವಾಸಿ ಸಮೇಗ್ದ್​ ಎಲ್​. ಜೆ.
Published on
ಉಡುಪಿ: ಮದ್ಯದ ಅಮಲಿನಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿ ಸ್ಕೂಟರ್​ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ಮುಡಾರು ನಿವಾಸಿ ಸಮೇಗ್ದ್​ ಎಲ್​. ಜೆ. (25) ಬಂಧಿತ. ಅಪಘಾತದಲ್ಲಿ ಅಲೆವೂರು ಗ್ರಾಮದ ಕರ್ವಾಲು ತೋಟದಮನೆ ನಿವಾಸಿ ಅಭಿಷೆೇಕ್​ ನಾಯಕ್​ (21) ಗಂಭೀರವಾಗಿ ಗಾಯಗೊಂಡಿದ್ದರು.
ಜೂನ್​ 19ರಂದು ರಾತ್ರಿ ಸುಮಾರು 10 ಗಂಟೆಗೆ ಈ ಅಪಘಾತ ಸಂಭವಿಸಿದೆ. ಅಭಿಷೇಕ್​ ನಾಯಕ್​ ಸ್ಕೂಟಿಯಲ್ಲಿ ಕಾರ್ಯನಿಮಿತ್ತ ಮಣಿಪಾಲಕ್ಕೆ ಬಂದು, ಬಳಿಕ ಕೆಳಪರ್ಕಳದಲ್ಲಿರುವ ಮನೆಗೆ ವಾಪಸ್ಸು ಹೋಗುತ್ತಿದ್ದರು. ಎಂ.ಐ.ಟಿ ಕಡೆಯಿಂದ ಬಂದ ಆರೋಪಿ ಸಮೇಗ್ದ್​ ತನ್ನ ಕಾರನ್ನು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟರ್​ಗೆ ಡಿಕ್ಕಿ ಹೊಡೆದಿದ್ದ. ಇದರಿಂದ ಸ್ಕೂಟರ್​ ಸವಾರ ಗಂಭೀರಗಾಗೊಂಡಿದ್ದರು. ಚಾಲಕನು ಮದ್ಯದ ಅಮಲಿನಲ್ಲೇ ವಾಹನ ಚಲಾಯಿಸಿ ಈ ಅಪಘಾತ ಎಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಜೂನ್​ 22ರಂದು ಮಣಿಪಾಲ ಪೊಲೀಸರು ಆರೋಪಿ ಚಾಲಕನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net