ಮಾದಕ ವಸ್ತು ಸಾಗಾಟ ಆರೋಪಿ ಸೆರೆ

ಮುಹಮ್ಮದ್ ಅಬೂಬಕ್ಕರ್
ಮುಹಮ್ಮದ್ ಅಬೂಬಕ್ಕರ್
Published on
ಕಾಸರಗೋಡು: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ಮತ್ತು ಮಾರಾಟ ಪ್ರಕರಣಗಳ ಆರೋಪಿ ಚೆಂಗಳ ಸಮೀಪದ ನಾಲ್ಕನೇ ಮೈಲಿ ನಿವಾಸಿ ಮುಹಮ್ಮದ್ ಅಬೂಬಕ್ಕರ್ ಎಂಬಾತನನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈತನ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಸಾಗಾಟ ಸಂಬಂಧ ಹಲವು ಪ್ರಕರಣಗಳು ದಾಖಲಾಗಿವೆ. ವಿದ್ಯಾನಗರ, ಮೆಲ್ಪರಂಬ ಹಾಗೂ ಆದೂರು ಠಾಣೆಗಳಲ್ಲಿ ಈತನ ವಿರುದ್ಧ ಎನ್‌ಡಿಪಿಎಸ್‌ನಡಿ ಕೇಸ್ ದಾಖಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net