ಮಾದಕ ವಸ್ತು ಮಾರಾಟ, ಯುವಕನ ಬಂಧನ

ಬಂಧನಕ್ಕೊಳಕ್ಕಾದ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಯುವಕ ಸೈಯ್ಯದ್​ ಮೊಹಮ್ಮದ್​ ಮೆಹರಾಜ್​.
ಬಂಧನಕ್ಕೊಳಕ್ಕಾದ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಯುವಕ ಸೈಯ್ಯದ್​ ಮೊಹಮ್ಮದ್​ ಮೆಹರಾಜ್​.
Published on

* ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಕೆ

* 1.52 ಲಕ್ಷ ರೂ. ಮೊತ್ತದ ಸೊತ್ತು ವಶ

ಉಡುಪಿ: ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದು, ಒಟ್ಟು 1.52 ಲಕ್ಷ ರೂ. ಮೊತ್ತದ ಸೊತ್ತು ವಶಪಡಿಸಿಕೊಂಡಿದ್ದಾರೆ.
ಬ್ರಹ್ಮಾವರ ತಾಲೂಕಿನ ಆಕಾಶವಾಣಿ ಸಮೀಪದ ರೆಸಿಡೆನ್ಸಿ ನಿವಾಸಿ, ಶಿರೂರು ಜೆ.ಎಂ. ಕ್ರಾಸ್​ ರಸ್ತೆ ಮಾರ್ಗದ ಮುಸ್ಲಿ ಮೊಹಲ್ಲಾದ ಖಾಯಂ ನಿವಾಸಿ ಸೈಯ್ಯದ್​ ಮೊಹಮ್ಮದ್​ ಮೆಹರಾಜ್​ (19) ಬಂಧಿತ ಆರೋಪಿ.
ಉಡುಪಿ ತಾಲೂಕು ಕೊಡವೂರು ಗ್ರಾಮದ ಮಲ್ಪೆಯ ಸಾರ್ವಜನಿಕ ಸ್ಥಳದಲ್ಲಿ ಹಾಗೂ ಕಾಪು, ಬ್ರಹ್ಮಾವರ, ಉಡುಪಿ, ಮಣಿಪಾಲದಲ್ಲಿರುವ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದನು. ಈ ವೇಳೆ ಉಡುಪಿ ಉಪವಿಭಾಗದ ಪೊಲೀಸ್​ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು., ಮಲ್ಪೆ ಪೊಲೀಸ್​ ನಿರೀಕ್ಷಕ ರಾಮಚಂದ್ರ ನಾಯಕ್​ ಅವರ ನೇತೃತ್ವದಲ್ಲಿ ಮಲ್ಪೆ ಠಾಣೆ ಪೊಲೀಸರು ಯುವಕನ್ನು ಬಂಧಿಸಿದರು.
ಆರೋಪಿಯ ಬಳಿಯಿದ್ದ 1.03 ಮಿಲಿ ಗ್ರಾಂ ತೂಕದ ಎಂಡಿಎಂಎ, ಸಾಗಾಟಕ್ಕೆ ಬಳಸಿದ 1 ಬೈಕ್​ ಹಾಗೂ ಇನ್ನಿತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಲ್ಪೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net