ಬೆಳ್ಮಣ್ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ 'ನಶಾ ಮುಕ್ತ ಭಾರತ' ಅಭಿಯಾನ ನಡೆಯಿತು. ವೀರೇಂದ್ರ ಆರ್.ಕೆ., ಗೋಪಾಲ್, ಜಯಂತಿ ಶೆಟ್ಟಿ, ಪ್ರದೀಪ್, ರಾಘವೇಂದ್ರ ಪ್ರಭು ಕರ್ವಾಲು ಇದ್ದರು.
Published on:
Copied
Follow Us
* ರಾಘವೇಂದ್ರ ಪ್ರಭು ಕರ್ವಾಲು ಅನಿಸಿಕೆ
ಉಡುಪಿ: ವಿದ್ಯಾರ್ಥಿಗಳು ಕೆಟ್ಟ ಆಲೋಚನೆ ಮಾಡಬಾರದು. ದುಶ್ಚಟಗಳಿಂದ ಆರೋಗ್ಯ, ಆರ್ಥಿಕ ಮತ್ತು ಸಾಮಾಜಿಕವಾಗಿಯೂ ತೊಂದರೆ ಅನುಭವಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು. ನಮ್ಮ ದೃಷ್ಟಿಕೋನ ಬದಲಾಯಿಸಿದರೆ ದೃಶ್ಯವೂ ಬದಲಾಗಬಹುದು. ಉತ್ತಮ ಹವ್ಯಾಸಗಳು ಜೀವನಕ್ಕೆ ಹೊಸ ಬೆಳಕು ನೀಡಬಲ್ಲದು ಎಂದು ವ್ಯಕ್ತಿತ್ವ ವಿಕಸನ ತರಬೇತಿದಾರ ರಾಘವೇಂದ್ರ ಪ್ರಭು ಕರ್ವಾಲು ಕಿವಿಮಾತು ಹೇಳಿದರು.
ಬೆಳ್ಮಣ್ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜೆಸಿಐ ಬೆಳ್ಮಣ್, ಕಾಲೇಜಿನ ಇಕೋ ಕ್ಲಬ್ ಮತ್ತು ಸ್ಥಳೀಯ ಗ್ರಾಪಂ ಸಂಜೀವಿನಿ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ಮತ್ತು ಕಳ್ಳ ಸಾಗಣೆ ವಿರೋಧಿ ದಿನದ ನಿಮಿತ್ತ 'ನಶಾ ಮುಕ್ತ ಭಾರತ' ಅಭಿಯಾನದಲ್ಲಿ ಮಾತನಾಡಿದರು.
ಜೆಸಿಐ ಬೆಳ್ಮಣ್ ಅಧ್ಯಕ್ಷ ವೀರೇಂದ್ರ ಆರ್.ಕೆ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಗೋಪಾಲ್, ಜಯಂತಿ ಶೆಟ್ಟಿ, ವಲಯ ಉಪಾಧ್ಯಕ್ಷ ಪ್ರದೀಪ್ ಇತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ 'ನಶಾಮುಕ್ತ ಭಾರತ'ದ ಪ್ರಮಾಣವಚನ ಬೋಧಿಸಲಾಯಿತು.