ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ, ಹಿರಿಯ ವಕೀಲ ಮಟ್ಟಾರು ರತ್ನಾಕರ್ ಹೆಗ್ಡೆ ಮಾತನಾಡಿ, ದೇಶದಲ್ಲಿ ಎಸ್ಐಆರ್ ಪ್ರಕ್ರಿಯೆ ಇದೇ ಮೊದಲು ನಡೆಯುತ್ತಿಲ್ಲ. ಸ್ವಾತಂತ್ರ್ಯಾ ನಂತರ ಕಾಲಕಾಲಕ್ಕೆ ಈ ಕಾರ್ಯ ನಡೆದಿದೆ. ಕರ್ನಾಟಕ ಹಾಗೂ ದೇಶದಲ್ಲಿ ಕಾಂಗ್ರೆಸ್ ನಾಯಕರು, ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ, ತಮಿಳುನಾಡಲ್ಲಿ ಸ್ಟಾಲಿನ್ ಹೀಗೆ ಅನೇಕರು ಎಸ್ಐಆರ್ ವಿರೋಧಿಸಿದ್ದಾರೆ. ಅಸ್ಸಾಂ, ವೆಸ್ಟ್ ಬೆಂಗಾಲ್ನಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶದ ನುಸುಳುಕೋರರಿಗೆ ಮತದಾನದ ಹಕ್ಕು ನೀಡಲಾಗಿದೆ. ಹೀಗಾಗಿ ದೇಶದವರಲ್ಲದ ಹೆಸರನ್ನು ಮತದಾರರ ಪಟ್ಟಿಯಿಂದ ತೆರವು ಮಾಡುವುದು ಎಸ್ಐಆರ್ ಉದ್ದೇಶವಾಗಿದೆ. ಸಂವಿಧಾನಾತ್ಮಕಾವಾಗಿ ಈ ಕಾರ್ಯ ನಡೆಯುತ್ತಿದೆ ಎಂದರು.