ಪಿಕಪ್ ಅಪಘಾತದಲ್ಲಿ ಚಾಲಕ ಗಂಭೀರ ಗಾಯ

ಕೌಡಿಚ್ಚಾರು ಜಂಕ್ಷನ್ ಸಮೀಪ ಪಿಕಪ್ ವಾಹನ ತಡೆಗೋಡೆಗೆ ಡಿಕ್ಕಿಯಾಗಿರುವುದು.
ಕೌಡಿಚ್ಚಾರು ಜಂಕ್ಷನ್ ಸಮೀಪ ಪಿಕಪ್ ವಾಹನ ತಡೆಗೋಡೆಗೆ ಡಿಕ್ಕಿಯಾಗಿರುವುದು.
Published on
ಪುತ್ತೂರು ಗ್ರಾಮಾಂತರ: ಅರಿಯಡ್ಕ ಗ್ರಾಮದ ಕೌಡಿಚ್ಚಾರು ಜಂಕ್ಷನ್ ಸಮೀಪ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಮುಂಜಾನೆ ರಸ್ತೆ ಬದಿ ಮೋರಿಯ ತಡೆಗೋಡೆಗೆ ಪಿಕಪ್ ಡಿಕ್ಕಿಯಾಗಿ ಚಾಲಕ ಗಂಭೀರ ಗಾಯಗೊಂಡಿದ್ದಾರೆ.
ಸುಳ್ಯ ತಾಲೂಕಿನ ಮರ್ಕಂಜದ ಲೈಟಿಂಗ್ ಸಂಸ್ಥೆಯೊಂದಕ್ಕೆ ಸೇರಿದ್ದೆನ್ನಲಾದ ಪಿಕಪ್ ಕೌಡಿಚ್ಚಾರು ಜಂಕ್ಷನ್ ಪಕ್ಕದ ಪಲ್ಲದಕೆರೆ ಬಳಿ ಮೋರಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಪಿಕಪ್ ನಜ್ಜುಗುಜ್ಜಾಗಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಚಾಲಕನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net