_1776078376282.webp?w=480&auto=format%2Ccompress&fit=max)
_1776078376282.webp?w=480&auto=format%2Ccompress&fit=max)
ಕಾಸರಗೋಡು
: ಬೀದಿನಾಯಿ ಅಡ್ಡ ಬಂದು ನಿಯಂತ್ರಣ ತಪ್ಪಿದ ಆಟೋರಿಕ್ಷಾ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಚಾಲಕ ಮೃತಪಟ್ಟ ಘಟನೆ ಕಾಞಂಗಾಡು ಪುದಿಯಕೋಟೆಯಲ್ಲಿ ನಡೆದಿದೆ. ರಿಕ್ಷಾ ಚಾಲಕ, ಮಡಿಕೈ ಕೀಕ್ಕಾನಕೋಟೆ ನಿವಾಸಿ ಎಂ.ಎಸ್.ಮೋಹನನ್ (58) ಮೃತರು. ರಿಕ್ಷಾದಲ್ಲಿದ್ದ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.
ಅಲಾಮಿಪಳ್ಳಿಯಿಂದ ಪ್ರಯಾಣಿಕರನ್ನು ಕಾಞಂಗಾಡ್ ನಗರಕ್ಕೆ ಕರೆದೊಯ್ಯುತ್ತಿದ್ದ ವೇಳೆ ಹೊಸಕೋಟೆ ಇಂಡಿಯನ್ ಕಾಫಿ ಹೌಸ್ ಮುಂಭಾಗಕ್ಕೆ ತಲುಪಿದಾಗ ಬೀದಿ ನಾಯಿ ಅಡ್ಡವಾಗಿ ಏಕಾಏಕಿ ಸಂಚರಿಸಿದ್ದು, ನಾಯಿಯನ್ನು ರಕ್ಷಿಸುವ ಯತ್ನದಲ್ಲಿ ರಿಕ್ಷಾ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.