ಮನೆ ಲೇಲೆ ಲಾರಿ ಪಲ್ಟಿಯಾಗಿ ಚಾಲಕ ಸಾವು

ACCIDENT
ACCIDENT
Published on

ಕಾಸರಗೋಡು: ಹೊಸದುರ್ಗ ಮಡಿಕೈ ಕಾಞರಪೋಯಿಲ್ ಎಂಬಲ್ಲಿ ಶನಿವಾರ ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿ ಮನೆಯ ಮೇಲೆ ಬಿದ್ದ ಪರಿಣಾಮ ಚಾಲಕ, ಚಾಯೋಂ ನಿವಾಸಿ ಸಾದಿಕ್ (40) ಮೃತಪಟ್ಟಿದ್ದಾರೆ.

ಕೆಂಪುಕಲ್ಲು ಇಳಿಸಿದ ಬಳಿಕ ಲಾರಿಯನ್ನು ಹಿಂದಕ್ಕೆ ತೆಗೆಯುತ್ತಿದ್ದ ಸಂದರ್ಭ ಲಾರಿ ನಿಯಂತ್ರಣ ತಪ್ಪಿ ಸಮೀಪದ ಪಿ.ಗೋಪಾಲನ್ ಎಂಬವರ ಮನೆ ಮೇಲೆ ಬಿದ್ದಿದೆ. ಅಡುಗೆ ಕೋಣೆ ಸಂಪೂರ್ಣ ಹಾನಿಗೊಂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net