ಒತ್ತಡ ಕಡಿಮೆ ಮಾಡಲು ನಾಟಕ, ಸಂಗೀತ ಸಹಕಾರಿ

ರಂಗಸ್ಥಳ ಉಪ್ಪುಂದದ 17ನೇ ವಾರ್ಷಿಕೋತ್ಸವ ಹಾಗೂ ಮಕ್ಕಳ ರಂಗ ತರಬೇತಿ ಶಿಬಿರದಲ್ಲಿ ರೂಪುಗೊಂಡ ನಾಟಕ ಪ್ರದರ್ಶನವನ್ನು ಸಂವೇದನಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು. ರಂಗಸ್ಥಳ ಅಧ್ಯಕ್ಷ ಯು.ರಾಜಾರಾಮ ಭಟ್ ಇದ್ದರು.
ರಂಗಸ್ಥಳ ಉಪ್ಪುಂದದ 17ನೇ ವಾರ್ಷಿಕೋತ್ಸವ ಹಾಗೂ ಮಕ್ಕಳ ರಂಗ ತರಬೇತಿ ಶಿಬಿರದಲ್ಲಿ ರೂಪುಗೊಂಡ ನಾಟಕ ಪ್ರದರ್ಶನವನ್ನು ಸಂವೇದನಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು. ರಂಗಸ್ಥಳ ಅಧ್ಯಕ್ಷ ಯು.ರಾಜಾರಾಮ ಭಟ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಂಗಸ್ಥಳ ಉಪ್ಪುಂದದ 17ನೇ ವಾರ್ಷಿಕೋತ್ಸವ
  • ದಿ.ಯು.ರುರಾಮ ಶೆಟ್ಟಿ ಸಂಸ್ಮರಣೆ
  • ಮಕ್ಕಳ ರಂಗ ತರಬೇತಿ ಶಿಬಿರದಲ್ಲಿ ರೂಪುಗೊಂಡ ನಾಟಕ ಪ್ರದರ್ಶನ
ಬೈಂದೂರು: ಅವಸರದ ಬದುಕಿನಲ್ಲಿ ಇಂದು ನಾವು ಕಲೆ, ಸಾಹಿತ್ಯ, ಸಂಗೀತ ಮೊದಲಾದವನ್ನು ಮರೆಯುತ್ತಿದ್ದೇವೆ. ರಂಗಭೂಮಿಯಲ್ಲಿ ಮಕ್ಕಳನ್ನು ತೊಡಗಿಸಲು ಹೆತ್ತವರು ಹಿಂದೇಟು ಹಾಕುತ್ತಿದ್ದು, ಅಂಕ ತೆಗೆಯುವ ಯಂತ್ರವನ್ನಾಗಿ ರೂಪಿಸುತ್ತಿದ್ದಾರೆ. ಜೀವನದ ಒತ್ತಡ, ಗೊಂದಲಗಳನ್ನು ಕಡಿಮೆ ವಾಡಿಕೊಳ್ಳಲು ನಾಟಕ, ಸಂಗೀತ, ಯಕ್ಷಗಾನದಂತಹ ಕಲಾ ಪ್ರಕಾರಗಳು ಸಹಕಾರಿ ಎಂದು ಕಂಬದಕೋಣೆ ಸಂವೇದನಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಸುಬ್ರಹ್ಮಣ್ಯ ಭಟ್ ಹೇಳಿದರು.
ಉಪ್ಪುಂದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ರಂಗಸ್ಥಳ ಉಪ್ಪುಂದದ 17ನೇ ವಾರ್ಷಿಕೋತ್ಸವ, ದಿ.ಯು.ರುರಾಮ ಶೆಟ್ಟಿ ಸಂಸ್ಮರಣೆ ಹಾಗೂ ಮಕ್ಕಳ ರಂಗ ತರಬೇತಿ ಶಿಬಿರದಲ್ಲಿ ರೂಪುಗೊಂಡ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಶಿಬಿರ ನಿರ್ದೇಶಕ ಸತ್ಯನಾ ಕೊಡೇರಿ ಮಾತನಾಡಿದರು. ರಂಗಸ್ಥಳ ಅಧ್ಯಕ್ಷ ಯು.ರಾಜಾರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. 12 ಹಿರಿಯ ಕಲಾವಿದರಿಗೆ ರಂಗಭೂಮಿ ಗೌರವ ಸಮರ್ಪಿಸಲಾಯಿತು. ಕಲಾವಿದ ಉಪ್ಪುಂದ ಮಂಜುನಾಥ ಮಯ್ಯ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ರಂಗಕರ್ಮಿ ಬಿ.ಗಣೇಶ ಕಾರಂತ್, ಧಾರವಾಡ ಉದ್ಯಮಿ ಯು.ಪ್ರಶಾಂತ ಶೆಟ್ಟಿ, ವಿಶ್ವನಾಥ ಶೆಟ್ಟಿ ಸಹೋದರರು, ಶಾಲಾ ಮುಖ್ಯಶಿಕ್ಷಕ ಸುಧಾಕರ ದೇವಾಡಿಗ ಇದ್ದರು. ಗೌರವಾಧ್ಯಕ್ಷ ರಾಮಕೃಷ್ಣ ದೇವಾಡಿಗ ನಿರೂಪಿಸಿದರು. ನಂತರ ಮಕ್ಕಳ ರಂಗ ತರಬೇತಿ ಶಿಬಿರದಲ್ಲಿ ರೂಪುಗೊಂಡ ‘ಕುಪ್ಪಳ್ಳಿ ತಿಪ್ಪೇರಾಯ’ ನಾಟಕ ಪ್ರದರ್ಶನಗೊಂಡಿತು.

ರಂಗಭೂಮಿ ಕ್ಷೇತ್ರ ಆಗಾದ ಹಿನ್ನೆಲೆ ಹೊಂದಿದ್ದು, ಸ್ವಕೇಂದ್ರಿತ ಸವಾಜ ನಿರ್ವಾಣವಾಗುತ್ತಿರುವ ಕಾಲಟ್ಟದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ರಂಗ ಚಟುವಟಿಕೆಗಳು ಮುಖ್ಯ ಎಂದೆನಿಸಿಕೊಳ್ಳುತ್ತವೆ. ಪ್ರತಿಭಾವಂತರಿಗೆ ರಂಗಭೂಮಿಯಲ್ಲಿ ವಿಪುಲ ಅವಕಾಶಗಳಿದ್ದು, ಸದ್ಬಳಕೆ ವಾಡಿಕೊಳ್ಳುವ ಇಚ್ಛಾಶಕ್ತಿ ಮುಖ್ಯವಾಗಿರುತ್ತದೆ.

— ಸತ್ಯನಾ ಕೊಡೇರಿ ಮಕ್ಕಳ ರಂಗ ತರಬೇತಿ ಶಿಬಿರ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net