ರಸ್ತೆಯಲ್ಲೇ ಹರಿಯುತ್ತಿದೆ ಮಳೆ ನೀರು

 ಒಳಕಾಡು ವಾರ್ಡ್​ನ ಪಂಚರತ್ನ ಹೊಟೇಲ್​ ಹಿಂಬದಿ ರಸ್ತೆ ತಿರುವಿನಲ್ಲಿ ಮಳೆ ನೀರು  ರಸ್ತೆಯುದ್ದಕ್ಕೂ ಹರಿಯುತ್ತಿದೆ.
ಒಳಕಾಡು ವಾರ್ಡ್​ನ ಪಂಚರತ್ನ ಹೊಟೇಲ್​ ಹಿಂಬದಿ ರಸ್ತೆ ತಿರುವಿನಲ್ಲಿ ಮಳೆ ನೀರು ರಸ್ತೆಯುದ್ದಕ್ಕೂ ಹರಿಯುತ್ತಿದೆ.
Published on
ಉಡುಪಿ: ಒಳಕಾಡು ವಾರ್ಡ್​ನ ಪಂಚರತ್ನ ಹೊಟೇಲ್​ ಹಿಂಬದಿ ರಸ್ತೆ ತಿರುವಿನಲ್ಲಿ ಚರಂಡಿ ಕಾಂಕ್ರಿಟ್​ ಕಾಮಗಾರಿ ಅಪೂರ್ಣವಾಗಿದ್ದು, ಮಳೆ ನೀರು ರಸ್ತೆಯುದ್ದಕ್ಕೂ ಹರಿಯುತ್ತಿದೆ. ಇದರೊಂದಿಗೆ ಒಳಚರಂಡಿ ನೀರು ಸೇರಿಕೊಂಡರೆ ಪರಿಸರ ಪೂರ್ತಿ ದುರ್ವಾಸನೆಯಿಂದ ಕೂಡಿರುತ್ತದೆ.
ಪಂಚರತ್ನ ಹೊಟೇಲ್​ ಹಿಂಬದಿಯಿಂದ ಮೀನು ಮಾರುಕಟ್ಟೆ ಸಂಪರ್ಕಿಸುವ ರಸ್ತೆ ಸ್ವಲ್ಪ ತಗ್ಗು ಪ್ರದೇಶವಾಗಿದ್ದು, ಮೇಲಿನಿಂದ ಮಳೆ ನೀರು ಕೆಳಗೆ ಹರಿದು ಬರುತ್ತದೆ, ಕೆಲವು ವರ್ಷದ ಚರಂಡಿ ನಿಮಾರ್ಣಕ್ಕಾಗಿ ಕಾಮಗಾರಿ ಆರಂಭಿಸಿದ್ದರೂ ಅರ್ಧಕ್ಕೆ ಕಾಂಕ್ರೀಟ್​ ಹಾಕಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಡೆನೇಜ್​ನಲ್ಲಿ ನೀರು ಹರಿಯದೆ ರಸ್ತೆಯಲ್ಲೇ ನಿಲ್ಲುತ್ತಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯವಾದ ಚರಂಡಿ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಹೀಗಾಗಿ ಮಳೆ ನೀರು ಹರಿದು ಹೋಗುವ ಚರಂಡಿಯಲ್ಲಿ ಮಣ್ಣು ಶೇಖರಗೊಂಡಿದೆ. ಕಳೆ ಗಿಡಗಳು ಬೆಳೆದು ಚರಂಡಿಯೇ ಮಾಯವಾಗಿದೆ. ಪರಿಣಾಮ ಪ್ರತಿ ಮಳೆಗಾಲದಲ್ಲೂ ರಸ್ತೆ ಹೊಳೆಯಂತಾಗಿ ನೀರು ನಿಲ್ಲುವ ಸಮಸ್ಯೆ ಎದುರಾಗುತ್ತಿದೆ. ಈ ಬಾರಿಯೂ ಇದಕ್ಕೆ ಮುಕ್ತಿ ಸಿಕ್ಕಿಲ್ಲ. ಹಲವು ಬಾರಿ ನಗರಸಭೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳಿಯರು.
ರಸ್ತೆಯುದ್ದಕ್ಕೂ ಹರಿದು ತಗ್ಗು ಸ್ಥಳದ ರಸ್ತೆಯಲ್ಲಿ ಚರಂಡಿ ನೀರು ಶೇಖರಗೊಂಡು ರೋಗ ಹರಡುವ ಭೀತಿ ಎದುರಾಗಿದೆ. ತೋಡಿನ ಕಸ ವಿಲೇವಾರಿಯಾದರೂ ಸಮರ್ಪಕ ರೀತಿಯಲ್ಲಿ ಮಾಡಿದರೆ ಸಮಸ್ಯೆಗೆ ತಕ್ಕಮಟ್ಟಿಗೆ ಪರಿಹಾರ ಸಿಗಲಿದೆ.
"

ಕಳೆದ ನಾಲ್ಕು ವರ್ಷಗಳಿಂದ ಮಳೆಗಾಲದಲ್ಲಿ ಈ ಸಮಸ್ಯೆ ಎದುರಾಗುತ್ತಿದೆ. ಹಲವಾರು ಬಾರಿ ನಗರಸಭೆಗೆ ದೂರು ನೀಡಿದ್ದೇವೆ. ಆದರೆ ಯಾರೂ ಗಮನಹರಿಸುತ್ತಿಲ್ಲ. ಅಪೂರ್ಣ ಚರಂಡಿ ಕಾಮಗಾರಿ ಕೆಲಸ ಮತ್ತೆ ಪ್ರಾರಂಭಿಸಬೇಕು. ತೋಡುಗಳಲ್ಲಿ ಹೂಳೆತ್ತುವ ಕಾರ್ಯ ಮಾಡಬೇಕು.

— ಮೇಘನಾಥ ಹೆಗ್ಡೆ, ಸ್ಥಳಿಯರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net