ನವ ಉಡುಪಿ ನಿರ್ಮಾಣದ ಹರಿಕಾರ

ಉಡುಪಿಯ ಡಿಸಿ ಕಚೇರಿ ಬಳಿ ಇರುವ ಡಾ. ವಿ.ಎಸ್​. ಆಚಾರ್ಯ ಅವರ ಪುತ್ಥಳಿಗೆ ಯಶ್​ಪಾಲ್​ ಸುವರ್ಣ ಪುಷ್ಪನಮನ ಸಲ್ಲಿಸಿದರು. ಕುತ್ಯಾರು ನವೀನ್​ ಶೆಟ್ಟಿ, ಕ್ಯಾಪ್ಟನ್​ ಗಣೇಶ್​ ಕಾರ್ಣಿಕ್​, ದಿನೇಶ್​ ಅಮೀನ್​, ಪ್ರಭಾಕರ್​ ಪೂಜಾರಿ, ಕಿರಣಕುಮಾರ್​ ಬೈಲೂರು, ರಷ್ಮಿತಾ ಶೆಟ್ಟಿ, ನಳಿನಿ ಪ್ರದೀಪ್​ ರಾವ್​ ಇತರರಿದ್ದರು.
ಉಡುಪಿಯ ಡಿಸಿ ಕಚೇರಿ ಬಳಿ ಇರುವ ಡಾ. ವಿ.ಎಸ್​. ಆಚಾರ್ಯ ಅವರ ಪುತ್ಥಳಿಗೆ ಯಶ್​ಪಾಲ್​ ಸುವರ್ಣ ಪುಷ್ಪನಮನ ಸಲ್ಲಿಸಿದರು. ಕುತ್ಯಾರು ನವೀನ್​ ಶೆಟ್ಟಿ, ಕ್ಯಾಪ್ಟನ್​ ಗಣೇಶ್​ ಕಾರ್ಣಿಕ್​, ದಿನೇಶ್​ ಅಮೀನ್​, ಪ್ರಭಾಕರ್​ ಪೂಜಾರಿ, ಕಿರಣಕುಮಾರ್​ ಬೈಲೂರು, ರಷ್ಮಿತಾ ಶೆಟ್ಟಿ, ನಳಿನಿ ಪ್ರದೀಪ್​ ರಾವ್​ ಇತರರಿದ್ದರು.
Published on

* ಶಾಸಕ ಯಶ್​ಪಾಲ್​ ಸುವರ್ಣ ಶ್ಲಾಘನೆ

* ಡಾ. ವಿ. ಎಸ್​. ಆಚಾರ್ಯ ಪುಣ್ಯಸ್ಮರಣೆ

ಉಡುಪಿ: ಧಾರ್ಮಿಕ ಕ್ಷೇತ್ರ, ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ, ಕಲೆ ಹಾಗೂ ಸಾಂಸತಿಕ ಕ್ಷೇತ್ರಗಳ ಸಾಧನೆ ಮೂಲಕ ಉಡುಪಿ ಜಿಲ್ಲೆ ವಿಶ್ವದ ಗಮನ ಸೆಳೆಯುತ್ತಿದೆ. ಇವೆಲ್ಲದರ ನಡುವೆಯೇ ನವ ಉಡುಪಿ ನಿರ್ಮಾಣದಲ್ಲಿ ರಾಷ್ಟ್ರಕಂಡ ಶ್ರೇಷ್ಠ ರಾಜಕೀಯ ಮುತ್ಸದ್ದಿ, ಕೀರ್ತಿಶೇಷ ಡಾ. ವಿ.ಎಸ್​. ಆಚಾರ್ಯ ಅವರ ಕೊಡುಗೆ ಅಪಾರ ಎಂದು ಶಾಸಕ ಯಶ್​ಪಾಲ್​ ಸುವರ್ಣ ಶ್ಲಾಘಿಸಿದರು.
ಉಡುಪಿ ನಗರ ಬಿಜೆಪಿ ವತಿಯಿಂದ  ಶನಿವಾರ (ಫೆ.14) ಆಯೋಜಿಸಿದ್ದ ಡಾ. ವಿ.ಎಸ್​. ಆಚಾರ್ಯ ಪುಣ್ಯಸ್ಮರಣೆ ಕಾರ್ಯಕ್ರಮದ ನಿಮಿತ್ತ ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿರುವ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ನಮನ ಸಲ್ಲಿಸಿ, ಮಾತನಾಡಿದರು.

ರಾಜಕಾರಣಿಗಳಿಗೆ ಮಾದರಿ

ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ಡಾ. ಆಚಾರ್ಯರು ಅಚ್ಚಳಿಯದೇ ಇರುವ ನೆನಪಾಗಿದ್ದಾರೆ. ಯುವ ರಾಜಕಾರಣಿಗಳಿಗೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅವರು ಮಾದರಿಯಾಗಿದ್ದಾರೆ ಎಂದರು.
ವಿಧಾನ ಪರಿಷತ್​ ಮಾಜಿ ಸದಸ್ಯ ಕ್ಯಾಪ್ಟನ್​ ಗಣೇಶ್​ ಕಾರ್ಣಿಕ್​, ಉಡುಪಿ ನಗರ ಬಿಜೆಪಿ ಅಧ್ಯಕ್ಷ  ದಿನೇಶ್​ ಅಮೀನ್​, ಉಡುಪಿ ನಗರಸಭಾ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ್​ ಪೂಜಾರಿ, ಮಾಜಿ ಅಧ್ಯಕ್ಷ ಕಿರಣಕುಮಾರ್​ ಬೈಲೂರು, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಷ್ಮಿತಾ ಶೆಟ್ಟಿ, ನಗರಸಭಾ ಸದಸ್ಯರಾದ ಗಿರೀಶ್​ ಅಂಚನ್​, ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಪದಾಧಿಕಾರಿಗಳಾದ ನಳಿನಿ ಪ್ರದಿಪ್​ ರಾವ್​ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ನವ ಉಡುಪಿ ನಿಮಾರ್ಣದ ಹರಿಕಾರ, ಮಾಜಿ ಸಚಿವ ಡಾ. ವಿ.ಎಸ್​. ಆಚಾರ್ಯ ಪುಣ್ಯಸ್ಮರಣೆ ನಿಮಿತ್ತ ಉಡುಪಿ ನಗರಸಭಾ ಕಚೇರಿಯಲ್ಲಿರುವ ಪುತ್ಥಳಿಗೆ ಶಾಸಕ ಯಶ್​ಪಾಲ್​ ಸುವರ್ಣ ಮಾಲಾರ್ಪಣೆ ಮಾಡಿದರು. ನಿಕಟಪೂರ್ವ ಅಧ್ಯಕ್ಷ ಪ್ರಭಾಕರ್​ ಪೂಜಾರಿ, ಡಾ. ವಿ.ಎಸ್​. ಆಚಾರ್ಯ ಅವರ ಪುತ್ರ ಡಾ. ರವಿರಾಜ್​ ಆಚಾರ್ಯ, ನಗರಸಭಾ ಮಾಜಿ ಅಧ್ಯಕ್ಷ ಕಿರಣಕುಮಾರ್​ ಬೈಲೂರು, ಮಾಜಿ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಗಿರೀಶ್​ ಅಂಚನ್​, ರಾಜು, ರಶ್ಮಿ ಸಿ. ಭಟ್​, ಹರೀಶ್​ ಶೆಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net