ನವಭಾರತದ ಗ್ರಂಥಾಲಯ ಪರಿಕಲ್ಪನೆಗೆ ಹೊಸದಿಕ್ಕು

ಉಡುಪಿಯಲ್ಲಿ ಆಯೋಜಿಸಿದ್ದ ಡಾ. ಎಸ್​.ಆರ್​. ರಂಗನಾಥನ್​ ಜನ್ಮದಿನಾಚರಣೆಯನ್ನು ಕಿಶೋರ್​ ಎಚ್​.ವಿ. ಉದ್ಘಾಟಿಸಿದರು. ವಿನೀತ್​ ರಾವ್​,  ಡಾ. ಎಸ್​.ಆರ್​. ಅರುಣ್​,  ಡಾ. ಬಿ. ಜಗದೀಶ್​ ಶೆಟ್ಟಿ ಇದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಡಾ. ಎಸ್​.ಆರ್​. ರಂಗನಾಥನ್​ ಜನ್ಮದಿನಾಚರಣೆಯನ್ನು ಕಿಶೋರ್​ ಎಚ್​.ವಿ. ಉದ್ಘಾಟಿಸಿದರು. ವಿನೀತ್​ ರಾವ್​, ಡಾ. ಎಸ್​.ಆರ್​. ಅರುಣ್​, ಡಾ. ಬಿ. ಜಗದೀಶ್​ ಶೆಟ್ಟಿ ಇದ್ದರು.
Published on

* ಗ್ರಂಥಪಾಲಕ ಕಿಶೋರ್​ ಎಚ್​.ವಿ. ಅನಿಸಿಕೆ 

* ಉಡುಪಿಯಲ್ಲಿ ಜನ್ಮದಿನಾಚರಣೆ ಉದ್ಘಾಟನೆ

ಉಡುಪಿ: ಗ್ರಂಥಾಲಯಕ್ಕೆ ಪಂಚಸೂತ್ರ ಮತ್ತು ಕೊಲೊನ್​ ವರ್ಗೀಕರಣ ಮಾಡುವ ಮೂಲಕ ನವಭಾರತದ ಗ್ರಂಥಾಲಯದ ಪರಿಕಲ್ಪನೆಗೆ ಹೊಸದಿಕ್ಕು ಕಲ್ಪಿಸಿಕೊಟ್ಟ ಕೀರ್ತಿ ಡಾ. ಎಸ್​.ಆರ್​. ರಂಗನಾಥನ್​ ಅವರಿಗೆ ಸಲ್ಲುತ್ತದೆ. ಗಣಿತ ಪ್ರಾಧ್ಯಾಪಕರಾಗಿದ್ದರೂ ಅವರಿಗೆ ಪುಸ್ತಕಗಳ ಮೇಲೆ ಅದಮ್ಯ ಪ್ರೀತಿಯಿತ್ತು. 'ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ'ರಾಗಿ ಅವರು ಕೈಗೊಂಡ ವ್ಯವಸ್ಥೆಯಿಂದ ಶಾಲಾ-ಕಾಲೇಜುಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಗ್ರಂಥಾಲಯ ಇರುವಂತಾಗಿದೆ ಎಂದು ಎಂಜಿಎಂ ಕಾಲೇಜಿನ ಗ್ರಂಥಪಾಲಕ ಕಿಶೋರ್​ ಎಚ್​.ವಿ. ತಿಳಿಸಿದರು.
ಉಡುಪಿಯಲ್ಲಿರುವ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ್ದ ಡಾ. ಎಸ್​.ಆರ್​. ರಂಗನಾಥನ್​ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಎಂಜಿಎಂ ಕಾಲೇಜಿನ ಗಾಂಧಿಯನ್​ ಅಧ್ಯಯನ ಕೇಂದ್ರದ ನಿರ್ದೇಶಕ ವಿನೀತ್​ ರಾವ್​, ಆರ್​ಆರ್​ಸಿಯ ಸಹಸಂಶೋಧಕ ಡಾ. ಎಸ್​.ಆರ್​. ಅರುಣ್​ ಉಪಸ್ಥಿತರಿದ್ದರು.
ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್​ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net