ಅದ್ದೂರಿಯಾಗಿರಲಿ ಕನ್ನಡದ ಕಾರ್ಯಕ್ರಮ

ಮೂಡುಬಿದಿರೆಯ ನಿವಾಸದಲ್ಲಿ ಉಡುಪಿ ತಾಲೂಕು ಕಸಾಪ ಘಟಕದ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಡಾ. ಮೋಹನ್​ ಆಳ್ವ ಬಿಡುಗಡೆ ಮಾಡಿದರು. ರವಿರಾಜ್​ ಎಚ್​.ಪಿ., ಯು.ವಿಶ್ವನಾಥ್​ ಶೆಣೈ, ಪ್ರೊ. ಶಂಕರ್​, ಜನಾರ್ದನ್​ ಕೊಡವೂರು, ರಂಜನಿ ವಸಂತ್​, ರಾಜೇಶ್​ ಭಟ್​ ಪಣಿಯಾಡಿ ಇತರರಿದ್ದರು.
ಮೂಡುಬಿದಿರೆಯ ನಿವಾಸದಲ್ಲಿ ಉಡುಪಿ ತಾಲೂಕು ಕಸಾಪ ಘಟಕದ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಡಾ. ಮೋಹನ್​ ಆಳ್ವ ಬಿಡುಗಡೆ ಮಾಡಿದರು. ರವಿರಾಜ್​ ಎಚ್​.ಪಿ., ಯು.ವಿಶ್ವನಾಥ್​ ಶೆಣೈ, ಪ್ರೊ. ಶಂಕರ್​, ಜನಾರ್ದನ್​ ಕೊಡವೂರು, ರಂಜನಿ ವಸಂತ್​, ರಾಜೇಶ್​ ಭಟ್​ ಪಣಿಯಾಡಿ ಇತರರಿದ್ದರು.
Published on

* ಆಳ್ವಾಸ್​ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್​ ಆಳ್ವ ಆಶಯ

* ಉಡುಪಿ ತಾಲೂಕು ಕಸಾಪ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ: ಕನ್ನಡ ಸಾಹಿತ್ಯ ಪರಿಷತ್​ ಉಡುಪಿ ತಾಲೂಕು ಘಟಕದ ವತಿಯಿಂದ ಮೇ 3ರಂದು ಡಾ. ಭಾಸ್ಕರಾನಂದ ಕುಮಾರ್​ ಸರ್ವಾಧ್ಯಕ್ಷತೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸದ ವಿಚಾರ. ನಾವಿಬ್ಬರೂ ಒಟ್ಟಿಗೆ ರಂಗದಲ್ಲಿ ನಟಿಸಿದ್ದು, ಅವರು ಆತ್ಮೀಯರೂ ಹೌದು. ಹೀಗಾಗಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ನನಗೆ ಖುಷಿ ಆಗುತ್ತಿದೆ. ಉಡುಪಿಯ ಎಲ್ಲ ಸಾಹಿತ್ಯಾಭಿಮಾನಿಗಳು ಪಾಲ್ಗೊಳ್ಳಬೇಕು. ಕನ್ನಡದ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಬೇಕು ಎಂದು ಆಳ್ವಾಸ್​ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್​ ಆಳ್ವ ಆಶಯ ವ್ಯಕ್ತಪಡಿಸಿದರು.
ಮೂಡುಬಿದಿರೆಯ ನಿವಾಸದಲ್ಲಿ ಉಡುಪಿ ತಾಲೂಕು ಕಸಾಪ ಘಟಕದ 16ನೇ ಸಾಹಿತ್ಯ ಸಮ್ಮೇಳನ 'ಭೀಷ್ಮೋತ್ಸವ'ದ ಆಮಂತ್ರಣ ಪತ್ರಿಕೆಯನ್ನು ಶನಿವಾರ (ಏ.18) ಬಿಡುಗಡೆಗೊಳಿಸಿ ಮಾತನಾಡಿದರು.
ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್​ ಎಚ್​.ಪಿ., ಕಸಾಪ ಗೌರವ ಸಲಹೆಗಾರರಾದ ಯು.ವಿಶ್ವನಾಥ್​ ಶೆಣೈ, ಪ್ರೊ. ಶಂಕರ್​, ಗೌರವ ಕಾರ್ಯದರ್ಶಿಗಳಾದ ಜನಾರ್ದನ್​ ಕೊಡವೂರು, ರಂಜನಿ ವಸಂತ್​, ಗೌರವ ಕೋಶಾಧ್ಯಕ್ಷ ರಾಜೇಶ್​ ಭಟ್​ ಪಣಿಯಾಡಿ, ಮಾಧ್ಯಮ ಪ್ರತಿನಿಧಿ ಆಸ್ಟ್ರೊ ಮೋಹನ್​, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ವಸಂತ್​, ದೀಪಾ ಕರ್ಕಿ, ಚಂದ್ರಶೇಖರ್​, ಸಾಮಾಜಿಕ ಜಾಲತಾಣದ ಸಂಚಾಲಕ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net