ಸಹ ಕುಲಪತಿಯಾಗಿ ಡಾ. ಕರುಣಾಕರ್​ ನೇಮಕ

ಉಡುಪಿ ಮಣಿಪಾಲದ ಮಾಹೆ ವಿವಿಯ ಸಹ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ಕರುಣಾಕರ್​ ಎ. ಕೋಟೆಗಾರ್​ ಅವರನ್ನು ಮಾಹೆ ವಿವಿಯ ಸಹ ಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ಸ್ವಾಗತಿಸಿದರು.
ಉಡುಪಿ ಮಣಿಪಾಲದ ಮಾಹೆ ವಿವಿಯ ಸಹ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ಕರುಣಾಕರ್​ ಎ. ಕೋಟೆಗಾರ್​ ಅವರನ್ನು ಮಾಹೆ ವಿವಿಯ ಸಹ ಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ಸ್ವಾಗತಿಸಿದರು.
Published on

* ಮಾಹೆಯ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗ

ಉಡುಪಿ: ಮಣಿಪಾಲ್​ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ (ಮಾಹೆ)ನ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ ಕುಲಪತಿಯಾಗಿ ಡಾ. ಕರುಣಾಕರ್​ ಎ. ಕೋಟೆಗಾರ್​ ನೇಮಕಗೊಂಡಿದ್ದು, ಮಾಹೆವಿವಿಯ ಸಹ ಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ಸ್ವಾಗತಿಸಿದರು.
ವಿಭಾಗದ ಸಹ ಕುಲಪತಿಯಾಗಿದ್ದ ಡಾ. ನಾರಾಯಣ ಸಭಾಹಿತ್​ ಅವರ ಅಧಿಕಾರಾವಧಿ ಪೂರ್ಣಗೊಂಡಿದ್ದು, ಇದೀಗ ಮಾಹೆ ವಿವಿಯ ಸಲಹೆಗಾರರಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಶಿಕ್ಷಣತಜ್ಞ, ಆಡಳಿತಗಾರರಾಗಿರುವ ಡಾ. ಕೋಟೆಗಾರ್​, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬೋಧನೆ, ಸಂಶೋಧನೆ, ಶೈಕ್ಷಣಿಕ ನಾಯಕತ್ವ ಮತ್ತು ಅಂತಾರಾಷ್ಟ್ರೀಯ ಸಹಯೋಗಗಳಲ್ಲಿ 29 ವರ್ಷಗಳ ಅನುಭವ ಹೊಂದಿದ್ದಾರೆ. 2024ರ ಅಕ್ಟೋಬರ್​ನಿಂದ ಜೈಪುರದ ಮಣಿಪಾಲ್​ ಕ್ಯಾಂಪಸ್​ನಲ್ಲಿ ಪ್ರೊ ಪ್ರೆಸಿಡೆಂಟ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 
ಮಣಿಪಾಲ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿಯ (ಎಂಐಟಿ) ಡೇಟಾ ಸೈನ್ಸ್​ ಮತ್ತು ಕಂಪ್ಯೂಟರ್​ ಅಪ್ಲಿಕೇಶನ್ಸ್​ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿರುವ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ರ್ಜನಲ್​ಗಳು ಹಾಗೂ ಸಮ್ಮೇಳನಗಳ ನಡಾವಳಿಗಳಲ್ಲಿ 75ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ ಪ್ರಕಟಿಸಿದ್ದಾರೆ. ಒಂಬತ್ತು ಪಿಎಚ್​.ಡಿ (ಡಾಕ್ಟರಲ್​) ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದು, ಪ್ರಸ್ತುತ ಹಲವು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.
ಪ್ರತಿಷ್ಠಿತ ಇನ್​ಸ್ಟಿಟ್ಯೂಟ್​ ಆಫ್​ ಇಲೆಕ್ಟ್ರಿಕಲ್​ ಮತ್ತು ಇಲೆಕ್ಟ್ರಾನಿಕ್ಸ್​ ಇಂಜಿನಿಯರ್ಸ್​ ಸಂಸ್ಥೆಯ ಹಿರಿಯ ಸದಸ್ಯರಾಗಿ ಹಾಗೂ ಇಂಡಿಯನ್​ ಸೊಸೈಟಿ ಫಾರ್​ ಟೆಕ್ನಿಕಲ್​ ಎಜುಕೇಶನ್​ನ ಆಜೀವ ಸದಸ್ಯರಾಗಿದ್ದಾರೆ. ಕರ್ನಾಟಕದ ರಾಜ್ಯಪಾಲರ ನಾಮನಿರ್ದೇಶನದಂತೆ ಜೂನ್​ 2020ರಿಂದ ಜೂನ್​ 2023ರ ವರೆಗೆ ಮಂಗಳೂರು ವಿವಿ ಸಿಂಡಿಕೇಟ್​ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net