ಸಾಂವಿಧಾನಿಕ ನೈತಿಕತೆಯಿಂದ ಸಾಧ್ಯ ಸಮಾನತೆ

ಉಡುಪಿಯ ಜಿ.ಶಂಕರ್​ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ 'ಡಾ. ಬಿ.ಆರ್​. ಅಂಬೇಡ್ಕರ್​ ಓದು' ಕಾರ್ಯಕ್ರಮವನ್ನು ನಿರ್ಮಲಾ ಮಠಪತಿ ಉದ್ಘಾಟಿಸಿದರು. ಡಾ. ಪ್ರಸಾದ್​ ರಾವ್​, ಪೂರ್ಣಿಮಾ, ಡಾ.ನಿಕೇತನಾ, ಸಿದ್ದಲಿಂಗಯ್ಯ, ಪ್ರೊ. ಶ್ರೀಮತಿ ಅಡಿಗ, ಡಾ. ರಾಜೇಂದ್ರ ಕೆ., ಮಂಜುನಾಥ್​ ಇದ್ದರು.
ಉಡುಪಿಯ ಜಿ.ಶಂಕರ್​ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ 'ಡಾ. ಬಿ.ಆರ್​. ಅಂಬೇಡ್ಕರ್​ ಓದು' ಕಾರ್ಯಕ್ರಮವನ್ನು ನಿರ್ಮಲಾ ಮಠಪತಿ ಉದ್ಘಾಟಿಸಿದರು. ಡಾ. ಪ್ರಸಾದ್​ ರಾವ್​, ಪೂರ್ಣಿಮಾ, ಡಾ.ನಿಕೇತನಾ, ಸಿದ್ದಲಿಂಗಯ್ಯ, ಪ್ರೊ. ಶ್ರೀಮತಿ ಅಡಿಗ, ಡಾ. ರಾಜೇಂದ್ರ ಕೆ., ಮಂಜುನಾಥ್​ ಇದ್ದರು.
Published on

* ಪ್ರಾಧ್ಯಾಪಕ ಡಾ. ಪ್ರಸಾದ್​ ರಾವ್​ ಅಭಿಪ್ರಾಯ

* 'ಭಾರತರತ್ನ ಡಾ. ಬಿ.ಆರ್​. ಅಂಬೇಡ್ಕರ್​ ಓದು' ಕಾರ್ಯಕ್ರಮ

ಉಡುಪಿ: ವಿದ್ಯಾರ್ಥಿಗಳು ಸಂವಿಧಾನ ಶಿಲ್ಪಿ ಡಾ. ಬಿ.ಆರ್​. ಅಂಬೇಡ್ಕರ್​ ಅವರನ್ನು ಮೂರು ರೀತಿಯಲ್ಲಿ ಓದುವ ಮೂಲಕ ಅವರ ವಿಚಾರಧಾರೆ, ಅಧ್ಯಯನದ ಆಳ, ಸ್ವಾತಂತ್ರ್ಯ ಮತ್ತು ಜವಾಬ್ದಾರಿಯ ಅರಿವು ಬೆಳೆಸಿಕೊಳ್ಳಬಹುದು. ಧರ್ಮಾಧಾರಿತ ನೈತಿಕತೆಗಿಂತ ಸಾಂವಿಧಾನಿಕ ನೈತಿಕತೆ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಸಮಾನತೆ ಸಾಧಿಸಲು ಸಾಧ್ಯ ಎಂದು ಎಸ್​ಆರ್​ಎಸ್​ಎಂಎನ್​ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಪ್ರಸಾದ್​ ರಾವ್​ ಹೇಳಿದರು.
ಉಡುಪಿಯ ಅಜ್ಜರಕಾಡಿನಲ್ಲಿರುವ ಡಾ. ಜಿ. ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಸೋಮವಾರ (ಆ.24) ಆಯೋಜಿಸಿದ್ದ 'ಭಾರತರತ್ನ ಡಾ. ಬಿ.ಆರ್​. ಅಂಬೇಡ್ಕರ್​ ಓದು' ಕಾರ್ಯಕ್ರಮ'ದಲ್ಲಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ ಮಾತನಾಡಿ, ಅಂಬೇಡ್ಕರ್​ ಮೌಲ್ಯಗಳು ಸಾರ್ವಕಾಲಿಕವಾಗಿವೆ ಎಂದರು.

ಕಾಲೇಜಿನ ಪ್ರಾಂಶುಪಾಲೆ ಪ್ರೊ. ನಿಕೇತನಾ ಅಧ್ಯಕ್ಷತೆ ವಹಿಸಿದ್ದರು. ಡಾ.ಅಂಬೇಡ್ಕರ್​ ಕುರಿತ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಪ್ರೊ. ಶ್ರೀಮತಿ ಅಡಿಗ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಾಜೇಂದ್ರ ಕೆ., ರಾಜ್ಯಶಾಸ್ತ್ರ ಉಪನ್ಯಾಸಕ ಮಂಜುನಾಥ್​ ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಆಶಾ ಕಾರ್ಯಕ್ರಮ ನಿರೂಪಿಸಿದರು.
"

ಮರಾಠಿ ಭಾಷಿಕರಾಗಿದ್ದ ಡಾ.ಅಂಬೇಡ್ಕರ್​ ಸಂಸ್ಕೃತ, ಪಾಲಿ, ಹಿಂದಿ, ಜರ್ಮನ್​, ಇಂಗ್ಲಿಷ್​, ಫ್ರೆಂಚ್​ ಸೇರಿದಂತೆ ಹಲವು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಸುಮಾರು 50 ಸಾವಿರ ಪುಸ್ತಕಗಳನ್ನು ಓದಿ ಅವುಗಳ ಕುರಿತು ಟಿಪ್ಪಣಿ ಬರೆದಿದ್ದರು. ಮಹಾತ್ಮ ಗಾಂಧೀಜಿ, ವಿನಾಯಕ ದಾಮೋದರ ಸಾವರ್ಕರ್​ ಹಾಗೂ ಡಬ್ಲ್ಯೂಇಬಿ ಡು ಬಾಯ್ಸ್​ ಅವರಿಗೆ ಬರೆದ ಪತ್ರಗಳನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು. ಅವರು ರಚಿಸಿದ 'ಜಾತಿ ವಿನಾಶ' ಕೃತಿ ಓದಿದರೆ ನಮ್ಮ ಚಿಂತನಾ ಕ್ರಮವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದೆ.

— ಡಾ. ಪ್ರಸಾದ್​ ರಾವ್​. ಪ್ರಾಧ್ಯಾಪಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net