ಸಮಾನತೆಯ ಕೊಡುಗೆ ನೀಡಿದ ಭೀಮ

ಅಂಬೇಡ್ಕರ್​ ಜಯಂತಿ ನಿಮಿತ್ತ ವಿವಿಧ ಸಂಘಟನೆ ವತಿಯಿಂದ ಪರ್ಕಳದಲ್ಲಿ ಆಯೋಜಿಸಿದ್ದ  'ಭೀಮಯಾನ' ಮೆರವಣಿಗೆಗೆ ಸುಮಿತ್ರಾ ನಾಯಕ್​ ಹಾಗೂ ಮೋಹನದಾಸ್​ ನಾಯಕ್​ ಚಾಲನೆ ನೀಡಿದರು. ಸಂದೀಪ್​ ಶೆಟ್ಟಿ, ಯು. ಪರಮೇಶ್ವರ್​ ಉಪ್ಪೂರು, ಗಣೇಶ್​ರಾಜ್​ ಸರಳಬೆಟ್ಟು, ರಾಜಕುಮಾರ್​ ಪೆರ್ಣಂಕಿಲ ಇತರರಿದ್ದರು.
ಅಂಬೇಡ್ಕರ್​ ಜಯಂತಿ ನಿಮಿತ್ತ ವಿವಿಧ ಸಂಘಟನೆ ವತಿಯಿಂದ ಪರ್ಕಳದಲ್ಲಿ ಆಯೋಜಿಸಿದ್ದ 'ಭೀಮಯಾನ' ಮೆರವಣಿಗೆಗೆ ಸುಮಿತ್ರಾ ನಾಯಕ್​ ಹಾಗೂ ಮೋಹನದಾಸ್​ ನಾಯಕ್​ ಚಾಲನೆ ನೀಡಿದರು. ಸಂದೀಪ್​ ಶೆಟ್ಟಿ, ಯು. ಪರಮೇಶ್ವರ್​ ಉಪ್ಪೂರು, ಗಣೇಶ್​ರಾಜ್​ ಸರಳಬೆಟ್ಟು, ರಾಜಕುಮಾರ್​ ಪೆರ್ಣಂಕಿಲ ಇತರರಿದ್ದರು.
Published on

* ನಗರಸಭೆಯ ಮಾಜಿ ಅಧ್ಯೆ ಸುಮಿತ್ರಾ ನಾಯಕ್​ ಸಂತಸ

ಉಡುಪಿ: ಸಮಾಜದಲ್ಲಿದ್ದ ಅಸ್ಪೃಶ್ಯತೆ ವಿರುದ್ಧ ಪ್ರಬಲ ಹೋರಾಟ ನಡೆಸಿದ ಡಾ. ಬಿ.ಆರ್​. ಅಂಬೇಡ್ಕರ್​ ಅವರು ಜನರಿಗಿರುವ ಹಕ್ಕು ಲಭಿಸಲು ಕಾರಣೀಕರ್ತರಾಗಿದ್ದಾರೆ. ದೇಶಕ್ಕೆ ಸಂವಿಧಾನ ರಚಿಸುವ ಮೂಲಕ ಸಮಾನತೆಯ ಕೊಡುಗೆ ನೀಡಿದ ಭೀಮರಾಗಿದ್ದಾರೆ ಎಂದು ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷೆ ಸುಮಿತ್ರಾ ನಾಯಕ್​ ಹೇಳಿದರು. 
ಸಂವಿಧಾನ ಶಿಲ್ಪಿ ಡಾ. ಬಿ.ಆರ್​. ಅಂಬೇಡ್ಕರ್​ ಜನ್ಮದಿನದ ನಿಮಿತ್ತ ಅಂಬೇಡ್ಕರ್​ ಯುವಸೇನೆ (ರಿ.) ಉಡುಪಿ ಜಿಲ್ಲೆ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ.) ಉಡುಪಿ ಜಿಲ್ಲೆ, ಕರ್ನಾಟಕ ರಾಜ್ಯ ಎಸ್​ಸಿ-ಎಸ್​ಟಿ ಗುತ್ತಿಗೆದಾರರ ಸಂಘ (ರಿ.) ಉಡುಪಿ ಜಿಲ್ಲೆ, ಕರ್ನಾಟಕ ರಾಜ್ಯ ಭೋವಿ ವಡ್ಡರ್​ ಕ್ಷೇಮಾಭಿವೃದ್ಧಿ ಸಂಘ (ರಿ.) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ವತಿಯಿಂದ ಪರ್ಕಳದಲ್ಲಿ ಮಂಗಳವಾರ ಆಯೋಜಿಸಿದ್ದ 'ಭೀಮಯಾನ' (ಯುವಜನರಿಗಾಗಿ ಅಂಬೇಡ್ಕರ್​ ಹಬ್ಬ) ರ್ಯಾಲಿಯಲ್ಲಿ ಮಾತನಾಡಿದರು.
ಕಾಂಗ್ರೆಸ್​ನ ಹಿರಿಯ ಮುಖಂಡ ಮೋಹನದಾಸ್​ ನಾಯಕ್​ ಮೆರವಣಿಗೆಗೆ ಚಾಲನೆ ನೀಡಿದರು. ಗುತ್ತಿಗೆದಾರ ಸಂದೀಪ್​ ಶೆಟ್ಟಿ ಬಡಗಬೆಟ್ಟು, ಗುತ್ತಿಗೆದಾರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಯು. ಪರಮೇಶ್ವರ್​ ಉಪ್ಪೂರು, ಸಾಮಾಜಿಕ ಕಾರ್ಯಕರ್ತ ಗಣೇಶ್​ರಾಜ್​ ಸರಳಬೆಟ್ಟು, ಕರ್ನಾಟಕ ಭೋವಿ ವಡ್ಡರ್​ ಕ್ಷೇಮಾಭಿವೃದ್ಧಿ ಸಂಘ ಉಡುಪಿ ಜಿಲ್ಲೆಯ ಅಧ್ಯಕ್ಷ ರಾಜಕುಮಾರ್​ ಪೆರ್ಣಂಕಿಲ,  ನಾರಾಯಣ ಪರ್ಕಳ, ಜಗದೀಶ್​ ಪರ್ಕಳ, ಭೋವಿ ಸಮಾಜದ ಮುಖಂಡ ಶಿವಕುಮಾರ್​ ಪರ್ಕಳ, ನಾಗರಾಜ್​ ಕುಕ್ಕದಕಟ್ಟೆ, ಯುವ ಭೋವಿ ಸಮಾಜದ ಜಿಲ್ಲಾಧ್ಯಕ್ಷ ಸಂದೇಶ್​ ಕುಮಾರ್​ ಪೆರ್ಡೂರು ಇತರರಿದ್ದರು.
ಡಾ.ಅಂಬೇಡ್ಕರ್​ರ ಭಾವಚಿತ್ರ ಇರುವ ವಾಹನದೊಂದಿಗೆ ಟ್ಯಾಬ್ಲೊ, ನಾಸಿಕ್​ ಬ್ಯಾಂಡ್​, ಚಂಡೆ, ಇನ್ನಿತರ ವಾದ್ಯದೊಂದಿಗೆ ಉಡುಪಿ ನಗರದ ವಿವಿಧೆಡೆ ಜಾಥಾ ನಡೆಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net