ಕೇರಳದಲ್ಲಿ ಡಾ.ಬಾಲಕೃಷ್ಣ ಎಸ್. ಮದ್ದೋಡಿ ಅವರಿಗೆ 'ಶ್ರೀ ಬಿಕ್ಷು ಲಕ್ಷ್ಮಾನಂದ ಸ್ವಾಮೀಜಿ ಸದ್ಭಾವನಾ' ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಮೇಶ ಸ್ವಾಮೀಜಿ, ಡಾ.ಕೃಷ್ಣಪ್ರಸಾದ್ ಕೂಡ್ಲು, ಪ್ರದೀಪಕುಮಾರ್ ಕಲ್ಕೂರ, ಡಾ. ಕೆ.ಎನ್. ವೆಂಕಟರಮಣ ಹೊಳ್ಳ ಇತರರಿದ್ದರು.
Published on:
Copied
Follow Us
* ಕೇರಳ ಚುಸಾಪ ವಾರ್ಷಿಕೋತ್ಸವ
ಉಡುಪಿ: ಕೇರಳ ರಾಜ್ಯದ ಕನ್ನಡ ಚುಟುಕು ಸಾಹಿತ್ಯ ಪರಿಷತ್ನ ವಾರ್ಷಿಕೋತ್ಸವದ ನಿಮಿತ್ತ ಕೇರಳ ರಾಜ್ಯದ ಕಾಸರಗೋಡಿನ ಕನ್ನಡ ಭವನದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮಣಿಪಾಲ ತಂತ್ರಜ್ಞಾನ ಸಂಸ್ಥೆಯ ಖ್ಯಾತ ಪರಿಸರವಾದಿ ಹಾಗೂ ಸಮಾಜ ಸೇವಾ ಕಾರ್ಯಕರ್ತ, ಪ್ರಾಧ್ಯಾಪಕ ಡಾ.ಬಾಲಕೃಷ್ಣ ಎಸ್. ಮದ್ದೋಡಿ ಅವರಿಗೆ "ಶ್ರೀ ಬಿಕ್ಷು ಲಕ್ಷ್ಮಾನಂದ ಸ್ವಾಮೀಜಿ ಸದ್ಭಾವನಾ' ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಡೆನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಗೋನಾಳದ ರಮೇಶ ಸ್ವಾಮೀಜಿ, ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಕೃಷ್ಣಪ್ರಸಾದ್ ಕೂಡ್ಲು, ಚುಟುಕು ಸಾಹಿತ್ಯ ಪರಿಷತ್ನ ಕೇಂದ್ರ ಸಮಿತಿಯ ಗೌರವಾಧ್ಯಕ್ಷ ಪ್ರದಿಪಕುಮಾರ್ ಕಲ್ಕೂರ, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಡಾ. ಕೆ.ಎನ್. ವೆಂಕಟರಮಣ ಹೊಳ್ಳ, ಕನ್ನಡ ಭವನದ ಸ್ಥಾಪಕಾಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಉಪಸ್ಥಿತರಿದ್ದರು.
ಕನ್ನಡ ಭವನದ ಕಾರ್ಯದರ್ಶಿ ವಸಂತ್ ಕೆರೆಮನೆ, ಸಂಧ್ಯಾ ಬೇಕಲ್, ಪ್ರದೀಪಕುಮಾರ್ ಬೇಕಲ್, ಪಿ.ವಿ. ಪ್ರದಿಪಕುಮಾರ್, ಶಾಂತಾ ಪುತ್ತೂರು, ಡಾ.ಸುರೇಶ್ ನೆಲಗುಳಿ, ಡಾ.ಗೋವಿಂದ್ ಕೊಳ್ಚಪೆ, ಡಾ.ತಮ್ಮನಗೌಡ್ರ, ಪತ್ರಕರ್ತ ಸಿ.ವೈ. ಮೆಣಸಿನಕಾಯಿ, ಶಿಕ್ಷಕರ ಸಂಘದ ಮುಖಂಡ ರಾಮಕೃಷ್ಣ ಶಿರೂರ ಇತರರಿದ್ದರು.