ಪರಿಶೀಲಿಸದೆ ತೆರೆಯಬೇಡಿ ಅಪರಿಚಿತರ ಲಿಂಕ್​, ಸಂದೇಶ

ಉಡುಪಿಯ ಅಜ್ಜರಕಾಡಿನ ಕಾಲೇಜ್​ನಲ್ಲಿ ಮಹದೇವ ಜಿ.ಆರ್​. ಅವರು ಸೈಬರ್​ ಸುರಕ್ಷತೆ ಹಾಗೂ ಆನ್​ಲೈನ್​ ವಂಚನೆಗಳ ತಡೆ ಕುರಿತು ಮಾಹಿತಿ ನೀಡಿದರು. ಪ್ರೊ. ಡಾ. ನಿಕೇತನಾ, ದಿನೇಶ್​, ಮಹಾಲಕ್ಷ್ಮೀ, ಡಾ. ಅಬ್ದುಲ್​ ರಜಾಕ್​, ರಾಕೇಶ್​ ಇದ್ದರು.
ಉಡುಪಿಯ ಅಜ್ಜರಕಾಡಿನ ಕಾಲೇಜ್​ನಲ್ಲಿ ಮಹದೇವ ಜಿ.ಆರ್​. ಅವರು ಸೈಬರ್​ ಸುರಕ್ಷತೆ ಹಾಗೂ ಆನ್​ಲೈನ್​ ವಂಚನೆಗಳ ತಡೆ ಕುರಿತು ಮಾಹಿತಿ ನೀಡಿದರು. ಪ್ರೊ. ಡಾ. ನಿಕೇತನಾ, ದಿನೇಶ್​, ಮಹಾಲಕ್ಷ್ಮೀ, ಡಾ. ಅಬ್ದುಲ್​ ರಜಾಕ್​, ರಾಕೇಶ್​ ಇದ್ದರು.
Published on: 

* ವಿದ್ಯಾರ್ಥಿನಿಯರಿಗೆ ಮಹದೇವ ಜಿ.ಆರ್​. ಸಲಹೆ

* ಸೈಬರ್​ ವಂಚನೆ ತಡೆಗಾಗಿ ಜಾಗೃತಿ ಉಪನ್ಯಾಸ

ಉಡುಪಿ: ಅಪರಿಚಿತರು ಕಳುಹಿಸುವ ಲಿಂಕ್​ ಹಾಗೂ ಕೊಡುಗೆಗಳ ಸಂದೇಶಗಳನ್ನು ಪರಿಶೀಲಿಸದೆ ತೆರೆಯಬಾರದು. ಒಟಿಪಿ, ಪಾಸ್​ವರ್ಡ್​ ಸೇರಿದಂತೆ ಯಾವುದೇ ಗೌಪ್ಯ ಮಾಹಿತಿಯನ್ನೂ ಅಪರಿಚಿತರಿಗೆ ನೀಡಬಾರದು. ಯಾರಾದರೂ ವಂಚನೆಗೆ ಒಳಗಾದರೆ ಕೂಡಲೇ ಸೈಬರ್​ ಕ್ರೈಂ ಸಹಾಯವಾಣಿ 1930ಕ್ಕೆ ಕರೆ ಮಾಡಬೇಕು ಎಂದು ಪೊಲೀಸ್​ ಕಾನ್​ಸ್ಟೇಬಲ್​ ಮಹದೇವ ಜಿ.ಆರ್​. ಸಲಹೆ ನೀಡಿದರು.

ಉಡುಪಿ ಅಜ್ಜರಕಾಡಿನ ಡಾ. ಜಿ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್​ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಉಡುಪಿ ಮಹಿಳಾ ಪೊಲೀಸ್​ ಠಾಣೆ ಸಹಕಾರದಲ್ಲಿ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ಸೈಬರ್​ ಸುರಕ್ಷತೆ ಹಾಗೂ ಆನ್​ಲೈನ್​ ವಂಚನೆಗಳ ತಡೆ ಮಾಹಿತಿಯ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆನ್​ಲೈನ್​ನಲ್ಲಿ ವಸ್ತು ಖರೀದಿಸಿದ ಬಳಿಕ ಗ್ರಾಹಕರಿಗೆ ಕೆಲ ನಕಲಿ ಕಂಪನಿಗಳು ಆಕರ್ಷಕ ಕೊಡುಗೆ ನೀಡುವುದಾಗಿ ಕರೆ, ಸಂದೇಶ ಅಥವಾ ಲಿಂಕ್​ಗಳನ್ನು ಕಳುಹಿಸುತ್ತಾರೆ. ಬಳಿಕ ವೈಯಕ್ತಿಕ ಹಾಗೂ ಹಣಕಾಸು ಮಾಹಿತಿ. ಒಟಿಪಿಯನ್ನೂ ಪಡೆದು ವಂಚಿಸುತ್ತಾರೆ ಎಂದು ತಿಳಿಸಿದರು.

1.20 ಕೋಟಿ ರೂ. ವಂಚನೆ

ಇತ್ತೀಚೆಗೆ ಉಡುಪಿಯ ಎಂಬಿಬಿಎಸ್​ ವೈದ್ಯರೊಬ್ಬರು ಸೈಬರ್​ ವಂಚನೆಗೊಳಗಾಗಿ 1.20 ಕೋಟಿ ರೂ. ನಷ್ಟ ಮಾಡಿಕೋಮಡಿದ್ದರು. ಬಳಿಕ ಆರೋಪಿಯನ್ನು ದಕ್ಷಿಣ ಕೋರಿಯಾದಲ್ಲಿ ಪತ್ತೆಹಚ್ಚಲಾಗಿದೆ. ಜನರನ್ನು ವಂಚಿಸಲು ವರ್ಚುಯಲ್​ ಪ್ರೈವೇಟ್​ ನೆಟ್​ವರ್ಕ್​ (ವಿಪಿಎನ್​) ಬಳಸಲಾಗಿತ್ತು. ಇತ್ತೀಚೆಗೆ ಆನ್​ಲೈನ್​ ಪಾಮಿಸ್ಟ್ರಿ (ಹಸ್ತಸಾಮುದ್ರಿಕಾ) ಆ್ಯಪ್​ಗಳ ಮೂಲಕ ಬೆರಳಚ್ಚು ಸೇರಿದಂತೆ ಸೂಕ್ಷ್ಮ ಬಯೋಮೆಟ್ರಿಕ್​ ಮಾಹಿತಿಯನ್ನೂ ಕದ್ದು ವಂಚಿಸಲಾಗುತ್ತಿದೆ. ಆಗಾಗ ಇ-ಮೇಲ್​ ಪಾಸ್​ವರ್ಡ್​ ಬದಲಾಯಿಸುವಿವುದರಿಂದ ಸೈಬರ್​ ವಂಚನೆ ತಡೆಯಬಹುದು ಎಂದರು.

ಎಎಸ್​ಐ ದಿನೇಶ್​, ಪೊಲೀಸ್​ ಕಾನ್​ಸ್ಟೇಬಲ್​ ಮಹಾಲಕ್ಷ್ಮೀ, ಎಂಕಾಂ ಸಂಯೋಜಕ ಡಾ. ಅಬ್ದುಲ್​ ರಜಾಕ್​, ಎನ್​ಎಸ್​ಎಸ್​ ಕಾರ್ಯಕ್ರಮಾಧಿಕಾರಿ ರಾಕೇಶ್​ ಉಪಸ್ಥಿತರಿದ್ದರು.

ಕೃತಿಕಾ ಕಾರ್ಯಕ್ರಮ ನಿರೂಪಿಸಿದರು. ಎನ್​ಎಸ್​ಎಸ್​ ಕಾರ್ಯಕ್ರಮಾಧಿಕಾರಿ ಡಾ. ಸಫಿಯಾ ಸ್ವಾಗತಿಸಿದರು. ಶ್ರಾವಣಿ ವಂದಿಸಿದರು.

ಡಿಜಿಟಲ್​ ಯುಗದಲ್ಲಿ ವಿದ್ಯಾರ್ಥಿನಿಯರು ಹೆಚ್ಚು ಜಾಗರೂಕರಾಗಿರಬೇಕು. ಆಗುತ್ತಿರುವ ವಂಚನೆಗಳನ್ನು ಅರಿತು ಜಾಗೃತರಾಗಿ ಸೈಬರ್​ ಸುರಕ್ಷತೆಯ ಕುರಿತು ಸಾರ್ವಜನಿಕರಲ್ಲಿಯೂ ಅರಿವು ಮೂಡಿಸಬೇಕು.
ಪ್ರೊ. ಡಾ. ನಿಕೇತನಾ. ಕಾಲೇಜ್​ನ ಪ್ರಾಂಶುಪಾಲೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net