ಮುಖ್ಯ ಅತಿಥಿಗಳಾಗಿ ದೇರಳಕಟ್ಟೆ ಯೆನೆಪೋಯ ವೈದ್ಯಕೀಯ ವಿಶ್ವವಿದ್ಯಾಲಯದ ಕಿವಿ, ಮೂಗು, ಗಂಟಲು ವಿಭಾಗದ ಪ್ರಾಧ್ಯಾಪಕ ಡಾ.ಗಂಗಾಧರ ಸೋಮಯಾಜಿ ಕೆ.ಎಸ್., ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ರಾಘವೇಂದ್ರ ರಾವ್, ದೇರಳಕಟ್ಟೆ ಮಂಗಳೂರು ಯೆನೆಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕೀಲು, ಮೂಳೆ, ಸ್ನಾಯು ಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ.ಜನಾರ್ದನ ಐತಾಳ, ಯೆನೆಪೋಯ ವೈದ್ಯಕೀಯ ಕಾಲೇಜು ವೈದ್ಯೆ ಡಾ.ಸುಶ್ಮಿತಾ, ಬಳಗದವರಾದ ಕೆ.ಜಗದೀಶ ಆಚಾರ್ಯ, ಕೆ.ಶ್ರೀಪತಿ ಆಚಾರ್ಯ, ಕೆ.ರಾಘವೇಂದ್ರ, ಕೆ.ಶೀನ, ಕೆ.ತಮ್ಮಯ್ಯ, ಕೆ.ರಘು ಭಂಡಾರಿ, ಕೆ.ಉದಯ ಐತಾಳ, ಕೆ.ಶ್ರೀಕಾಂತ ಐತಾಳ, ನ್ಯೂ ಕಾರ್ಕಡ ಶಾಲಾ ಮುಖ್ಯಶಿಕ್ಷಕರು, ಅಧ್ಯಾಪಕರು, ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ, ಆಶಾಕಾರ್ಯಕರ್ತರು ಉಪಸ್ಥಿತರಿದ್ದರು. ಬಳಗದ ಉಪಾಧ್ಯಕ್ಷ ಶಶಿಧರ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನಾಗರಾಜ ಉಪಾಧ್ಯಾ ವಂದಿಸಿದರು. 170 ಜನ ಶಿಬಿರದ ಪ್ರಯೋಜನ ಪಡೆದರು.