ಜನ ಸಾಮಾನ್ಯರಿಗೆ ಸುಳ್ಳು ಭರವಸೆ ಸಲ್ಲ

 ಕೊಳ್ತಿಗೆ ಗ್ರಾಮದ ಪಾಂಬಾರು ಸಮೀಪದ ಬೀರ್ಮಕಜೆಯಲ್ಲಿ ತಡೆಗೋಡೆ ಕಾಮಗಾರಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸಗೈದರು. ಅಮಲ ರಾಮಚಂದ್ರ, ಕಾಂಗ್ರೆಸ್ ಮುಖಂಡರು ಮೊದಲಾದವರು ಇದ್ದರು.
ಕೊಳ್ತಿಗೆ ಗ್ರಾಮದ ಪಾಂಬಾರು ಸಮೀಪದ ಬೀರ್ಮಕಜೆಯಲ್ಲಿ ತಡೆಗೋಡೆ ಕಾಮಗಾರಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸಗೈದರು. ಅಮಲ ರಾಮಚಂದ್ರ, ಕಾಂಗ್ರೆಸ್ ಮುಖಂಡರು ಮೊದಲಾದವರು ಇದ್ದರು.
Published on
ಪುತ್ತೂರು ಗ್ರಾಮಾಂತರ: ಬಾರದ ಅನುದಾನವನ್ನು ಬರುತ್ತದೆ ಎಂದು ಹೇಳಿ ಈ ಹಿಂದೆ ಜನರಿಗೆ ಮೋಸ ಮಾಡಿರುವ ಆರೋಪಗಳು ಕೇಳಿ ಬರುತ್ತಿದೆ. ಆದರೆ ಸಮಸ್ಯೆ ಹೇಳಿಕೊಳ್ಳಲು ಮತ್ತು ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ತಮ್ಮ ಬಳಿಗೆ ಬರುವ ಜನ ಸಾಮಾನ್ಯರಿಗೆ ಜನಪ್ರತಿನಿಧಿಗಳು ಸುಳ್ಳು ಭರವಸೆ ನೀಡಿ, ಮೋಸ ಮಾಡಬಾರದು. ಅದು ಜನಪ್ರತಿನಿಧಿಗಳಿಗೆ ಶೋಭೆ ತರುವುದಿಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದರು.
ಪುತ್ತೂರು ತಾಲೂಕಿನ ಬೆಟ್ಟಂಪಾಡಿ, ಕೊಳ್ತಿಗೆ ಸೇರಿದಂತೆ ವಿವಿಧ ಕಡೆಗಳಲ್ಲಿ ತಡೆಗೋಡೆ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿಯೊಂದೇ ನನ್ನ ಮೂಲ ಮಂತ್ರ. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಜತೆಗೆ ಹೊಸ ಹೊಸ ಉದ್ಯಮಗಳನ್ನು ಪುತ್ತೂರಿಗೆ ತರುವುದು, ಇಲ್ಲಿನ ಯುವಕರಿಗೆ ಉದ್ಯೋಗ ಕೊಡಿಸುವುದು ನನ್ನ ಮುಖ್ಯ ಧ್ಯೇಯವಾಗಿದೆ ಎಂದರು.
ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕದಲ್ಲಿ ಹೊಳೆಯ ಬದಿ 60 ಲಕ್ಷದ ತಡೆಗೋಡೆ ನಿರ್ಮಾಣ ಕಾಮಗಾರಿ, ಕೊಳ್ತಿಗೆ ಗ್ರಾಮದ ಮುಖ್ಯ ರಸ್ತೆಯ ಬಳಿ 40 ಲಕ್ಷ ರೂ. ಅನುದಾನದ ತಡೆಗೋಡೆ ಕಾಮಗಾರಿ ಮತ್ತು ಪಾಂಬಾರು ಬೀರ್ಮಕಜೆ ರಸ್ತೆ ಬದಿ 20 ಲಕ್ಷ ರೂ. ಅನುದಾನದ ತಡೆಗೋಡೆ ಕಾಮಗಾರಿ, ಕೊಳ್ತಿಗೆ ಗ್ರಾಮದ ಕಟ್ಟಪುಣಿ ಎಂಬಲ್ಲಿ ಹೊಳೆ ಬದಿ 50 ಲಕ್ಷ ರೂ.ಅನುದಾನದ ತಡೆಗೋಡೆ ಕಾಮಗಾರಿಗೆ ಶಿಲಾನ್ಯಾಸಗೈದರು.
ಬೆಟ್ಟಂಪಾಡಿ ಗ್ರಾಮದ ಬಾರ್ತಕುಮೇರು ಎಂಬಲ್ಲಿ 60 ಲಕ್ಷ ರೂ.ಅನುದಾನದಲ್ಲಿ ನಿರ್ಮಾಣಗೊಂಡ ತಡೆಗೋಡೆ ಕಾಮಗಾರಿ ಉದ್ಘಾಟಿಸಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪುತ್ತೂರು ಪೂಡಾ ಅಧ್ಯಕ್ಷ ಅಮಲ ರಾಮಚಂದ್ರ ಹಾಗೂ ಬೆಟ್ಟಂಪಾಡಿ ಮತ್ತು ಕೊಳ್ತಿಗೆ ವ್ಯಾಪ್ತಿಯ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net