ಅಕ್ರಮ ಸಕ್ರಮಕ್ಕೆ ಲಂಚ ನೀಡಬೇಡಿ

 ನಿಡ್ಪಳ್ಳಿ ಗ್ರಾಪಂ ಸಮುದಾಯ ಭವನದಲ್ಲಿ ಮಂಗಳವಾರ 24ನೇ ಅಕ್ರಮ ಸಕ್ರಮ ಬೈಠಕ್ ಮತ್ತು 94 ಸಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ರೈ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು. ಎಸ್.ಬಿ.ಕೂಡಲಗಿ, ಮಹಮ್ಮದ್ ಬಡಗನ್ನೂರು, ರಾಮಣ್ಣ ಪಿಲಿಂಜ ಮತ್ತಿತರರಿದ್ದರು.
ನಿಡ್ಪಳ್ಳಿ ಗ್ರಾಪಂ ಸಮುದಾಯ ಭವನದಲ್ಲಿ ಮಂಗಳವಾರ 24ನೇ ಅಕ್ರಮ ಸಕ್ರಮ ಬೈಠಕ್ ಮತ್ತು 94 ಸಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ರೈ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು. ಎಸ್.ಬಿ.ಕೂಡಲಗಿ, ಮಹಮ್ಮದ್ ಬಡಗನ್ನೂರು, ರಾಮಣ್ಣ ಪಿಲಿಂಜ ಮತ್ತಿತರರಿದ್ದರು.
Published on
ಪುತ್ತೂರು ಗ್ರಾಮಾಂತರ: ಅಕ್ರಮ ಸಕ್ರಮ ಮಾಡಲು ಯಾರೂ ದುಡ್ಡು ಕೊಡಬೇಕಾದ ಅಗತ್ಯವಿಲ್ಲ. ಲಂಚ ನೀಡಿ ತಮ್ಮ ಕೆಲಸ ಮಾಡಿಸಿಕೊಳ್ಳುವುದು ಅಭ್ಯಾಸವಾಗಿ ಬಿಟ್ಟಿದ್ದು, ಅದನ್ನು ಮುಂದುವರಿಸಬೇಡಿ. ಯಾರಾದರೂ ಲಂಚಕ್ಕೆ ಬೇಡಿಕೆ ಇಟ್ಟರೆ ನನ್ನ ಗಮನಕ್ಕೆ ತರಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ನಿಡ್ಪಳ್ಳಿ ಗ್ರಾಪಂ ಸಮುದಾಯ ಭವನದಲ್ಲಿ ಮಂಗಳವಾರ 24ನೇ ಅಕ್ರಮ ಸಕ್ರಮ ಬೈಠಕ್ ಮತ್ತು 94 ಸಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಕ್ರಮ ಸಕ್ರಮಕ್ಕೆ ಸಂಬಂಧಿಸಿ ಹೆಚ್ಚಾಗಿ ಬಡವರ ಕಡತಗಳೇ ಕಂದಾಯ ಕಚೇರಿಯಲ್ಲಿ ಬಾಕಿಯಾಗಿತ್ತು. ಆರ್ಥಿಕವಾಗಿ ಶಕ್ತಿ ಇಲ್ಲದ ಬಡವರ ಕಡತಗಳನ್ನು ಕಚೇರಿಯಲ್ಲೇ ಗಂಟು ಹಾಕಿ ಇಟ್ಟಿದ್ದರು. ಆ ಕಡತಗಳ ಗಂಟು ಬಿಚ್ಚಿ ವಿಲೇವಾರಿ ಮಾಡಲಾಗುತ್ತಿದೆ. ಚುನಾವಣೆ ಸಂದರ್ಭ ಕೊಟ್ಟ ಮಾತಿನಂತೆ ಮನೆಬಾಗಿಲಿಗೆ ಬಂದು ಜಾಗದ ಹಕ್ಕುಪತ್ರ ಕೊಡಿಸುತಿದ್ದೇನೆ ಎಂದರು.
ಅಕ್ರಮ ಸಕ್ರಮ ಸಮಿತಿ ಕಾರ್ಯದರ್ಶಿ ಎಸ್.ಬಿ.ಕೂಡಲಗಿ ಮಾತನಾಡಿ, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಅಕ್ರಮ ಸಕ್ರಮ ಬೈಠಕ್ ನಡೆಯುತ್ತಿದೆ. ಎಷ್ಟೋ ವರ್ಷಗಳಿಂದ ಬಾಕಿ ಇದ್ದ ಕಡತಗಳು 2 ವರ್ಷಗಳಿಂದ ವಿಲೇವಾರಿಯಾಗುತ್ತಿದೆ ಎಂದರು.
ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ, ರೂಪಾರೇಖಾ ಆಳ್ವ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷ ಚಂದ್ರ ನಾಯ್ಕ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net