ಮಸೀದಿ ವಠಾರದಿಂದ ಕಾಣಿಕೆ ಹುಂಡಿ ಕಳವು

Theft
Theft
Published on
ಕಾಸರಗೋಡು: ಹೊಸದುರ್ಗ ಕೋಟಚ್ಚೇರಿ ಟ್ರಾಫಿಕ್ ಸರ್ಕಲ್ ಸಮೀಪದ ಬದ್ರಿಯಾ ಮಸೀದಿ ವಠಾರದಲ್ಲಿ ಸ್ಥಾಪಿಸಲಾಗಿದ್ದ ಕಾಣಿಕೆ ಹುಂಡಿ ಕೆಡವಿ ಅದರಿಂದ ನಗದು ದೋಚಲಾಗಿದೆ. ಈ ಬಗ್ಗೆ ಲಭಿಸಿದ ದೂರಿನನ್ವಯ ಮಸೀದಿ ಆಸುಪಾಸು ಸ್ಥಾಪಿಸಲಾಗಿರುವ ಸಿಸಿ ಕ್ಯಾಮರಾ ತಪಾಸಣೆ ನಡೆಸಿರುವ ಪೊಲೀಸರು, ಕಾಣಿಕೆಹುಂಡಿ ಕಳವುಗೈದಿರುವ ಆರೋಪಿಯೆಂದು ಸಂಶಯಿಸಿರುವ ವ್ಯಕ್ತಿಗಳ ದೃಶ್ಯವನನ್ನು ಪಡೆದಿದ್ದು ಸೆರೆಯಾಗಿದ್ದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಚಿತ್ರ ಬಹಿರಂಗಪಡಿಸಿರುವ ಪೊಲೀಸರು ಚಿತ್ರದಲ್ಲಿನ ವ್ಯಕ್ತಿಯ ಕುರಿತು ಮಾಹಿತಿ ಲಭಿಸಿದವರು ಸಮೀಪದ ಪೊಲೀಸ್ ಠಾಣೆಗೆ ಅಥವಾ ಹೊಸದುರ್ಗ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net