ಗಣತಿ ಶಿಕ್ಷಕಿ ಮೇಲೆ ನಾಯಿ ದಾಳಿ

dog attack
dog attack
Published on
ಕುಂಬಳೆ: ಜನಗಣತಿ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೇಲೆ ಸಾಕುನಾಯಿ ದಾಳಿ ನಡೆಸಿದ ಘಟನೆ ನಡೆದಿದೆ. ಪುತ್ತಿಗೆ ಐಡೆಡ್ ಜೂನಿಯರ್ ಬೇಸಿಕ್ ಶಾಲಾ ಶಿಕ್ಷಕಿ ಇರಿಯಣ್ಣಿ ನಿವಾಸಿ ಇ.ಶ್ರೀಜಾ (40) ನಾಯಿ ದಾಳಿಯಿಂದ ಗಾಯಗೊಂಡಿದ್ದಾರೆ.
ಭಾನುವಾರ ಪುತ್ತಿಗೆ ಹೆಡ್ಡರಕಟ್ಟೆ ಉನ್ನತಿಗೆ ಸೆನ್ಸಸ್‌ಗಾಗಿ ಹೋದಾಗ ಕಟ್ಟಿ ಹಾಕಿದ್ದ ಸಾಕುನಾಯಿಯೊಂದು ಸಂಕೋಲೆ ತುಂಡರಿಸಿ ಬಂದು ಕಚ್ಚಿದೆ ಎನ್ನಲಾಗಿದೆ. ಕೂಡಲೇ ಶಿಕ್ಷಕಿ ಇ.ಶ್ರೀಜಾ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜು.3ರಂದು ತ್ರಿಕರಿಪುರ ಉಡುಂಬುಂದಲ ಜಿಎಲ್‌ಪಿ ಶಾಲೆಯ ಶಿಕ್ಷಕ ಮುಹಮ್ಮದ್ ಕಬೀರ್ ಅವರಿಗೂ ಸೆನ್ಸಸ್ ಕರ್ತವ್ಯದಲ್ಲಿರುವಾಗ ಸಾಕುನಾಯಿ ಕಚ್ಚಿ ಗಾಯಗೊಳಿಸಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net