ಆದರ್ಶ ಆಸ್ಪತ್ರೆಯಲ್ಲಿ ಜು.5ರಂದು ವೈದ್ಯರ ದಿನಾಚರಣೆ

ಉಡುಪಿ ನಗರದಲ್ಲಿರುವ ಆದರ್ಶ ಆಸ್ಪತ್ರೆ.
ಉಡುಪಿ ನಗರದಲ್ಲಿರುವ ಆದರ್ಶ ಆಸ್ಪತ್ರೆ.
Published on

* ವಿವಿಧ ವೈದ್ಯರಿಗೆ ಸನ್ಮಾನ, ಗೌರವ 

* ವೈದ್ಯಕೀಯ ತಪಾಸಣಾ ಉಚಿತ ಶಿಬಿರ

ಉಡುಪಿ: ಆದರ್ಶ ಚಾರಿಟೇಬಲ್​ ಟ್ರಸ್ಟ್​ (ರಿ), ಆದರ್ಶ ಆಸ್ಪತ್ರೆ ಉಡುಪಿ ಹಾಗೂ ಉಡುಪಿ ಜಿಲ್ಲಾ ನಿವೃತ್ತ ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಘದ ಆಶ್ರಯದಲ್ಲಿ ಜು.5ರಂದು ಬೆಳಗ್ಗೆ 9 ಗಂಟೆಗೆ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಉಡುಪಿ ಜಿಲ್ಲಾ ವೈದ್ಯರ ದಿನಾಚರಣೆ, ವೈದ್ಯರಿಗೆ ಸನ್ಮಾನ ಆಯೋಜಿಸಲಾಗಿದೆ.
ಕಾರ್ಯಕ್ರಮದ ನಿಮಿತ್ತ ಉಡುಪಿ ಜಿಲ್ಲಾ ನಿವೃತ್ತ ಪೊಲೀಸ್​ ಅಧಿಕಾರಿ ಹಾಗೂ ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ಬೃಹತ್​ ವೈದ್ಯಕೀಯ ತಪಾಸಣಾ ಉಚಿತ ಶಿಬಿರ ಆಯೋಜಿಸಲಾಗಿದೆ.
ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ವೈದ್ಯರುಗಳಾದ ಉಡುಪಿ ಆದರ್ಶ ಆಸ್ಪತ್ರೆಯ ಮೂಳೆ ಮತ್ತು ಕೀಲು ರೋಗ ತಜ್ಞ ಡಾ.ಮೋಹನ್​ ದಾಸ್​ ಶೆಟ್ಟಿ, ಕಾರ್ಕಳದ ಸಿಟಿ ನರ್ಸಿಂಗ್​ ಹೋಂನ ಮೂಳೆ ಮತ್ತು ಕೀಲು ರೋಗ ತಜ್ಞ ಡಾ. ರಿಜ್ವಾನ್​ ಅಹಮದ್​, ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಸೇಂಟ್​ ಇಗ್ನೇಶಿಯಸ್​ ಆಸ್ಪತ್ರೆಯ ವೈದ್ಯಕೀಯ ತಜ್ಞ ಡಾ. ಆಶಿಕ್​ ಕುಮಾರ್​ ಹೆಗ್ಡೆ, ಕರ್ಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ . ಸವಿತಾ ಕುಂದರ್​, ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗಿರೀಶ್​ ಗೌಡ ಅವರನ್ನು ಸನ್ಮಾನಿಸಲಾಗುತ್ತಿದೆ.
ಮಾಜಿ ಸಂಸದ ಕೆ.ಜಯಪ್ರಕಾಶ್​ ಹೆಗ್ಡೆ ,ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಮ್​ ಶಂಕರ್​, ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜ ಹುಬ್ಬಳಿ, ಉಡುಪಿ ಜಿಲ್ಲಾ ಸರ್ಜನ್​ ಡಾ. ಎಚ್​. ಅಶೋಕ್​ ಪಾಳ್ಗೊಳ್ಳಲಿದ್ದಾರೆ.
ಶಿಬಿರದಲ್ಲಿ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ, ರಕ್ತದ ಸಂಪೂರ್ಣ ಪರೀಕ್ಷೆ (ಸಿಬಿಸಿ), ರಕ್ತದ ಸಕ್ಕರೆ ಪರೀಕ್ಷೆ (ಆರ್​ಬಿಎಸ್​), ಕೊಲೆಸ್ಟ್ರಾಲ್​ ಪರೀಕ್ಷೆ, ಇಸಿಜಿ ಸೇರಿದಂತೆ ವಿವಿಧ ಆರೋಗ್ಯ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುವುದು. ಅಗತ್ಯವಿರುವವರಿಗೆ ಹೃದಯ ತಜ್ಞರ ಸಲಹೆ, ಇಕೋ ಹಾಗೂ ಟ್ರೆಡ್​ಮಿಲ್​ ಟೆಸ್ಟ್​ (ಟಿಎಂಟಿ) ಪರೀಕ್ಷೆಗಳನ್ನು ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಮಾಡಿಸಿಕೊಳ್ಳುವ ಅವಕಾಶವನ್ನೂ ಕಲ್ಪಿಸಲಾಗಿದೆ.
ಸಾರ್ವಜನಿಕರು  ಶಿಬಿರದ ಸದುಪಯೋಗ ಮಾಡಿಕೊಂಡು ತಮ್ಮ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net