

ಉಡುಪಿ: ಎಂಜಿಎಂ ಕಾಲೇಜ್ನ ಎನ್ಎಸ್ಎಸ್ ಘಟಕಗಳ ವತಿಯಿಂದ ದೀಪಾವಳಿ ಹಬ್ಬವನ್ನು ಈ ಬಾರಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ರಾತ್ರಿ ಪಾಳಿಯ ಕರ್ತವ್ಯದಲ್ಲಿರುವ ಕೆಎಸ್ಆರ್ಟಿಸಿ ಬಸ್ ಚಾಲಕರು ಹಾಗೂ ನಿರ್ವಾಹಕರ ಜತೆಗೆ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಯಿತು.
ಎನ್ಎಸ್ಎಸ್ ವಿದ್ಯಾರ್ಥಿಗಳು ಚಾಲಕರು, ನಿರ್ವಾಹಕರಿಗೆ ಆರತಿ ಬೆಳಗಿ, ಗಂಧವನ್ನಿಟ್ಟು ಸಿಹಿ ತಿನ್ನಿಸಿ ಶುಭಾಶಯ ಕೋರಿದರು. ಪ್ರತಿ ಬಸ್ನ ಒಳಗೆ ದೀಪದ ಪ್ರತಿಕವಾಗಿ ಲೈಟ್ ಇಡಲಾಯಿತು.
ಈ ಸಂದರ್ಭದಲ್ಲಿ ಎನ್ಎಸ್ಎಸ್ ಅಧಿಕಾರಿಗಳಾದ ಸುಚಿತ್ ಕೋಟ್ಯಾನ್, ಡಾ.ರೇಖಾ ಎನ್.ಚಂದ್ರ, ಫ್ರಾಗ್ರೆನ್ಸ್ ಆಫ್ ಹ್ಯುಮಾನಿಟಿ ಪರವಾಗಿ ರಾಯನ್ ಮಥಾಯಸ್, ಸುಶ್ಮಿತಾ ಕುಮಾರಿ ಹಾಗೂ ಎನ್ಎಸ್ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು.