ಯಕ್ಷಗಾನ ಡಿಪ್ಲೊಮಾದಲ್ಲಿ ದಿವಾಕರ ಆಚಾರ್ಯ ಉತ್ತೀರ್ಣ

ಬೆಂಗಳೂರಿನ ಬಿ.ಎಂ.ಶ್ರೀ ಕಲಾಭವನದಲ್ಲಿ ಕಲಾಭವನದಲ್ಲಿ ನಡೆದ ಸಮಾರಂಭದಲ್ಲಿ ದಿವಾಕರ ಆಚಾರ್ಯ ಗೇರುಕಟ್ಟೆ ಅವರಿಗೆ ಡಿಪ್ಲೊಮಾ ಸರ್ಟಿಫಿಕೆಟ್ ಪ್ರದಾನಿಸಲಾಯಿತು. ಡಾ.ಆರ್.ಲಕ್ಷ್ಮೀನಾರಾಯಣ, ಆನಂದ ರಾಮ ಉಪಾಧ್ಯ ಇತರರಿದ್ದರು.
ಬೆಂಗಳೂರಿನ ಬಿ.ಎಂ.ಶ್ರೀ ಕಲಾಭವನದಲ್ಲಿ ಕಲಾಭವನದಲ್ಲಿ ನಡೆದ ಸಮಾರಂಭದಲ್ಲಿ ದಿವಾಕರ ಆಚಾರ್ಯ ಗೇರುಕಟ್ಟೆ ಅವರಿಗೆ ಡಿಪ್ಲೊಮಾ ಸರ್ಟಿಫಿಕೆಟ್ ಪ್ರದಾನಿಸಲಾಯಿತು. ಡಾ.ಆರ್.ಲಕ್ಷ್ಮೀನಾರಾಯಣ, ಆನಂದ ರಾಮ ಉಪಾಧ್ಯ ಇತರರಿದ್ದರು.
Published on
ಬೆಳ್ತಂಗಡಿ: ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಸಂಯೋಜಿತವಾಗಿ ಬೆಂಗಳೂರಿನ ಕಲಾ ಕದಂಬ ಆರ್ಟ್ ಸೆಂಟರ್ ಮೂಲಕ 2024-25ನೇ ಸಾಲಿನ ಯಕ್ಷಗಾನ ಸರ್ಟಿಫಿಕೇಟ್ ಮತ್ತು ಡಿಪ್ಲೊವಾದ ಎರಡು ಸೆಮಿಸ್ಟರ್‌ಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೆಟ್ ಪ್ರದಾನ ಸಮಾರಂಭ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿ ಪ್ರೊ.ನಾಗೇಶ ವಿ.ಬೆಟ್ಟಕೋಟೆ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಬಿ.ಎಂ.ಶ್ರೀ ಕಲಾಭವನದಲ್ಲಿ ನಡೆಯಿತು.
ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ದಿವಾಕರ ಆಚಾರ್ಯ ಗೇರುಕಟ್ಟೆ ಅವರಿಗೆ ವಿವಿ ಕುಲಪತಿ ಡಾ.ಕೆ.ರಾಮಕೃಷ್ಣಯ್ಯ ಪದವಿ ಪ್ರದಾನಿಸಿದರು. ಈ ಮೂಲಕ ಯಕ್ಷಾಗನದಲ್ಲಿ ಡಿಪ್ಲೊಮಾ ಪಡೆದ ಮೊದಲ ದಕ್ಷಿಣ ಕನ್ನಡಿಗ ಎಂಬ ಹಿರಿಮೆಗೆ ಪಾತ್ರರಾದರು.
ಸವಾರಂಭದಲ್ಲಿ ಬಿ.ಎಂ.ಶ್ರೀ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಆರ್.ಲಕ್ಷ್ಮೀನಾರಾಯಣ, ಯಕ್ಷಗಾನ ವಿದ್ವಾಂಸರಾದ ಆನಂದ ರಾಮ ಉಪಾಧ್ಯ, ಫಣಿಗಿರಿ ಪ್ರತಿಷ್ಠಾನದ ಉಮೇಶ ಶಿರೂರು , ಕಲಾಕದಂಬ ಆರ್ಟ್ ಸೆಂಟರ್ ನಿರ್ದೇಶಕ ಡಾ.ರಾಧಾಕೃಷ್ಣ ಉರಾಳ, ಕಾರ್ಯದರ್ಶಿ ಮುರಳೀಧರ ನಾವಡ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net