ತಲ್ಲೂರು ಚರ್ಚ್‌ನಲ್ಲಿ ದಿವ್ಯ ಬಲಿ ಪೂಜೆ ಆಚರಣೆ

ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ದೇವಾಲಯದಲ್ಲಿ ಯೇಸು ಕ್ರಿಸ್ತರ ಜನ್ಮೋತ್ಸವವನ್ನು ಸಂಭ್ರಮದ ದಿವ್ಯ ಬಲಿ ಪೂಜೆಯೊಂದಿಗೆ ಆಚರಿಸಲಾಯಿತು
ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ದೇವಾಲಯದಲ್ಲಿ ಯೇಸು ಕ್ರಿಸ್ತರ ಜನ್ಮೋತ್ಸವವನ್ನು ಸಂಭ್ರಮದ ದಿವ್ಯ ಬಲಿ ಪೂಜೆಯೊಂದಿಗೆ ಆಚರಿಸಲಾಯಿತು
Published on
ಕುಂದಾಪುರ: ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ದೇವಾಲಯದಲ್ಲಿ ಯೇಸು ಕ್ರಿಸ್ತರ ಜನ್ಮೋತ್ಸವವನ್ನು ಸಂಭ್ರಮದ ದಿವ್ಯ ಬಲಿ ಪೂಜೆಯೊಂದಿಗೆ ಆಚರಿಸಲಾಯಿತು.
ಮಂಗಳೂರು ಸಂತ ಅಲೋಶಿಯಸ್ ಗೊಂಜಾಗ ಸಿಬಿಎಸ್‌ಇ ಶಾಲೆ ಪ್ರಾಂಶುಪಾಲ ರೋಹನ್ ಡಿ. ಅಲ್ಮೇಡಾ ಎಸ್.ಜೆ. ಅವರು ದಿವ್ಯ ಬಲಿ ಪೂಜೆಯನ್ನು ನೆರವೇರಿಸಿದರು. ಚರ್ಚ್‌ನ ಧರ್ಮಗುರು ಎಡ್ವಿನ್ ಡಿಸೋಜ ಅವರು ಸಹಕಾರ ನೀಡಿದರು. ದಿವ್ಯ ಬಲಿ ಪೂಜೆಯ ಪ್ರಾರ್ಥನಾ ವಿಧಿಯನ್ನು ಐಸಿಐಎಂ ಟಕದ ಸದಸ್ಯರು ನೆರವೇರಿಸಿದರು.
ದಿವ್ಯ ಬಲಿ ಪೂಜೆಯ ನಂತರ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಐಸಿವೈಎಂ ಟಕದ ಸದಸ್ಯರು ಚರ್ಚ್‌ನ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದರು. ಗೋದಲಿಯ ಅಲಂಕಾರ, ಗ್ರೀಟಿಂಗ್ ಕಾರ್ಡ್ ಮತ್ತು ನಕ್ಷತ್ರ ರಚನೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಚರ್ಚ್‌ನ ಧರ್ಮಗುರುಗಳು ಬಹುವಾನ ನೀಡಿ ಗೌರವಿಸಿದರು.
ಸಂಭ್ರವಾಚರಣೆಗೆ ಬೆಂಬಲ ನೀಡಿದವರು, ಗೋದಲಿ ನಿರ್ಮಿಸಿದ ಐಸಿಐಎಂ ಟಕ ಸದಸ್ಯರು ಹಾಗೂ ಅವರ ಸಚೇತಕರನ್ನು ಧರ್ಮಗುರುಗಳು ಸನ್ಮಾನಿಸಿದರು.
ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರು, ಕಾರ್ಯದರ್ಶಿ, ಆಯೋಗದ ಸಂಚಾಲಕರು ಹಾಗೂ ಧರ್ಮಭಗಿನಿಯರು ಹಾಜರಿದ್ದರು.
ಟಕದ ಸದಸ್ಯ ಎಲೊಯ್ಡ ಮೆಂಡೊನ್ಸಾ ನಿರೂಪಿಸಿದರು. ಐಸಿಐಎಂ ಟಕ ಅಧ್ಯಕ್ಷ ಎವಿಟಾ ಮೆಂಡೊನ್ಸಾ ಕಾರ್ಯಕ್ರಮ ಸಂಟಿಸಿದದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net