ಸಮರ್ಪಣಾ ಮನೋಭಾವದಿಂದ ದೈವಾನುಗ್ರಹ

 ಕೂಡ್ಲು ರಾಮದಾಸನಗರದ ಕಾಳ್ಯಾಂಗಾಡಿನಲ್ಲಿರುವ ಬಾರಿಕ್ಕಾಡು ಅಂಜಾರಿಲ್ಲಂ ತರವಾಡಿನಲ್ಲಿ ಕೊಂಡೆವೂರು ಶ್ರೀ ಆಶೀರ್ವಚನ ನೀಡಿದರು. ತಂತ್ರಿ ಉಳಿಯತ್ತಾಯ ವಿಷ್ಣು ಆಸ್ರ, ಜಗದೀಶ್ ಅತ್ತಾವರ ಮೊದಲಾದವರಿದ್ದರು.
ಕೂಡ್ಲು ರಾಮದಾಸನಗರದ ಕಾಳ್ಯಾಂಗಾಡಿನಲ್ಲಿರುವ ಬಾರಿಕ್ಕಾಡು ಅಂಜಾರಿಲ್ಲಂ ತರವಾಡಿನಲ್ಲಿ ಕೊಂಡೆವೂರು ಶ್ರೀ ಆಶೀರ್ವಚನ ನೀಡಿದರು. ತಂತ್ರಿ ಉಳಿಯತ್ತಾಯ ವಿಷ್ಣು ಆಸ್ರ, ಜಗದೀಶ್ ಅತ್ತಾವರ ಮೊದಲಾದವರಿದ್ದರು.
Published on
ಕಾಸರಗೋಡು: ತ್ಯಾಗ ಮತ್ತು ಸಮರ್ಪಣಾ ಮನೋಭಾವದೊಂದಿಗೆ ಸಮಾಜಕ್ಕೆ ನೀಡುವ ಕೊಡುಗೆಗಳಿಂದ ದೇವರೂ ಸಂಪ್ರೀತನಾಗುತ್ತಾನೆ ಎಂದು ಉಪ್ಪಳ ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ತಿಳಿಸಿದರು.
ಕೂಡ್ಲು ರಾಮದಾಸನಗರದ ಕಾಳ್ಯಾಂಗಾಡಿನಲ್ಲಿರುವ ಬಾರಿಕ್ಕಾಡು ಅಂಜಾರಿಲ್ಲಂ ತರವಾಡಿನ ನವೀಕೃತ ತರವಾಡು ಮನೆಯ ಗೃಹಪ್ರವೇಶ, ಕೊರತ್ತಿಯಮ್ಮ ಹಾಗೂ ಗುಳಿಗ ದೈವಗಳ ಪುನಃಪ್ರತಿಷ್ಠಾಪನಾ ಕಲಶಾಭಿಷೇಕ ಅಂಗವಾಗಿ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ತರವಾಡಿನ ತಂತ್ರಿ ಉಳಿಯತ್ತಾಯ ವಿಷ್ಣು ಆಸ್ರ ಅನುಗ್ರಹ ಸಂದೇಶ ನೀಡಿದರು. ತರವಾಡು ಸಮಿತಿ ಅಧ್ಯಕ್ಷ ಜಗದೀಶ್ ಅತ್ತಾವರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಸಭಾ ಸದಸ್ಯ ಡಾ.ಕೆ.ನಾರಾಯಣ ಬೆಂಗಳೂರು ಮುಖ್ಯ ಅತಿಥಿಯಾಗಿದ್ದರು. ತೆರುವತ್ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಸ್ಥಾನಿಕ ಗಣೇಶ ಮಡೆಯ, ಕ್ಷಿತಿ ಮಂಗಳೂರು, ವೇಣುಗೋಪಾಲನ್ ಉಪಸ್ಥಿತರಿದ್ದರು. ಜಯ ಕೆ.ಬಜಾಲ್ ಸ್ವಾಗತಿಸಿದರು. ಮಮತಾ ದೇವಾಂಗ ಕಾರ್ಯಕ್ರಮ ನಿರೂಪಿಸಿದರು. ಪ್ರಮೋದ್ ಕುಂಬಳೆ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ಭಜನಾ ತಂಡಗಳಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ಕುಣಿತ ಭಜನೆ, ಕೊರತ್ತಿಯಮ್ಮನ ಕೋಲ, ಗುಳಿಗ ದೈವದ ಕೋಲ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net