ಉಡುಪಿಯ ರಾಜಾಂಗಣದಲ್ಲಿ ಆಯೋಜಿಸಿದ್ದ ಸಂಗೀತ ಸ್ಪರ್ಧೆ ಕಾರ್ಯಕ್ರಮವನ್ನು ಡಾ. ಉದಯಕುಮಾರ್ ಸರಳತ್ತಾಯ ಉದ್ಘಾಟಿಸಿದರು. ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ರಂಜನ್ ಕಲ್ಕೂರ, ಹರಿಪ್ರಸಾದ್ ರೈ, ವಿದ್ಯಾಲತಾ ಶೆಟ್ಟಿ, ವಿಜಯಾ ಜಿ. ಬಂಗೇರ, ಯು.ವಿಶ್ವನಾಥ್ ಶೆಣೈ, ಗಣೇಶ್ ಶೇರಿಗಾರ್, ಅಡಲ್ಫ್ ಶರ್ವಿನ್ ಅಮ್ಮಣ್ಣ, ಉಪ್ಪೂರು ಭಾಗ್ಯಲಕ್ಷ್ಮೀ ಇದ್ದರು.
Published on:
Copied
Follow Us
* ಡಾ. ಉದಯಕುಮಾರ್ ಸರಳತ್ತಾಯ ಅನಿಸಿಕೆ
* ಉಡುಪಿ ರಾಜಾಂಗಣದಲ್ಲಿ ಅಂತಿಮ ಸ್ಪರ್ಧೆ ಉದ್ಘಾಟನೆ
ಉಡುಪಿ: ಸಾಹಿತ್ಯ ಬರೆದವರ ಅಭಿಪ್ರಾಯ, ಆಶಯದಂತೆ ಕಲಾವಿದರು ಹಾಡುವ ಸಂಗೀತ ಜನರ ಹೃದಯ ಮುಟ್ಟುವಂತಿರಬೇಕು. ಸಂಗೀತವು ಜನರ ಹೃನ್ಮನ ಸೆಳೆಯುವ ವಿಶಿಷ್ಟ ಕಲೆಯಾಗಿದೆ. ಸಂಗೀತಪ್ರಿಯನಾದ ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಸಂಗೀತದ ಅಂತಿಮ ಸ್ಪರ್ಧೆ ಆಯೋಜಿಸಿರುವುದು ಅರ್ಥಪೂರ್ಣ ಎಂದು ಪರ್ಯಾಯ ಶೀರೂರು ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ ತಿಳಿಸಿದರು.
ಉಡುಪಿಯ ರಾಜಾಂಗಣದಲ್ಲಿ ರಾಗ ವಾಹಿನಿ (ರಿ.) ಉಡುಪಿ, ಕಲಾ ಪ್ರಕಾರಗಳ ಸಂಸ್ಥೆಯಾದ ಕಲಾನಿಧಿ (ರಿ.) ಉಡುಪಿ ಮತ್ತು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಆಯೋಜಿಸಿದ್ದ 'ನನ್ನ ಹಾಡು ನನ್ನದು' 8ನೇ ಆವೃತ್ತಿಯ ಅಂತಿಮ ಸ್ಪರ್ಧೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸೋಲೇ ಪ್ರೇರಣೆಯಾಗಲಿ
ಉಡುಪಿಯ ಬಡಗಬೆಟ್ಟು ಸೊಸೈಟಿ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ, ಸ್ಪರ್ಧೆಯಲ್ಲಿ ಸೋಲು-ಗೆಲುವು ಇದ್ದೇ ಇದೆ. ಸೋಲಿನಿಂದ ಕುಗ್ಗದೆ ಅದನ್ನೇ ಮುಂದಿನ ಸಾಧನೆಗೆ ಪ್ರೇರಣೆಯನ್ನಾಗಿ ಮಾಡಿಕೊಳ್ಳಬೇಕು ಎಂದು ಸ್ಪರ್ಧಿಗಳಿಗೆ ಸಲಹೆ ನೀಡಿದರು.
ರಂಜನ್ ಕಲ್ಕೂರ, ಹರಿಪ್ರಸಾದ್ ರೈ, ಲಯನ್ ವಿದ್ಯಾಲತಾ ಶೆಟ್ಟಿ, ವಿಜಯಾ ಜಿ. ಬಂಗೇರ, ಯು.ವಿಶ್ವನಾಥ್ ಶೆಣೈ, ಗಣೇಶ್ ಶೇರಿಗಾರ್, ಸಂಗೀತ ವಿಶಾರದ ಅಡಲ್ಫ್ ಶರ್ವಿನ್ ಅಮ್ಮಣ್ಣ ಉಪಸ್ಥಿತರಿದ್ದರು.
ರಾಗ ವಾಹಿನಿ ಸಂಸ್ಥೆಯ ಕಾರ್ಯದರ್ಶಿ ರೋಹಿತ್ ಕುಮಾರ್ ಮಲ್ಪೆ ಪ್ರಾರ್ಥಿಸಿದರು. ಕಲಾನಿಧಿ ಸಂಸ್ಥೆಯ ಅಧ್ಯಕ್ಷೆ ಉಪ್ಪೂರು ಭಾಗ್ಯಲಕ್ಷ್ಮೀ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಉಪನ್ಯಾಸಕ ಡಿ.ದಯಾನಂದ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು.