ಸಂಭ್ರಮದಿಂದ ಆಚರಿಸಿ ಬಿಜೆಪಿ ಸಂಸ್ಥಾಪನಾ ದಿನ

ಉಡುಪಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಂಗಳೂರು ವಿಭಾಗ ಪ್ರಭಾರಿ ಭಾರತೀಶ್​ ಕೊಡಗು ಅವರನ್ನು ಕುತ್ಯಾರು ನವೀನ್​ ಶೆಟ್ಟಿ ಸನ್ಮಾನಿಸಿದರು. ಕಿರಣಕುಮಾರ್​ ಬೈಲೂರು, ದಿನಕರ್​ ಶೆಟ್ಟಿ ಹೆರ್ಗ, ಸತ್ಯಾನಂದ ನಾಯಕ್​ ಇದ್ದರು.
ಉಡುಪಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಂಗಳೂರು ವಿಭಾಗ ಪ್ರಭಾರಿ ಭಾರತೀಶ್​ ಕೊಡಗು ಅವರನ್ನು ಕುತ್ಯಾರು ನವೀನ್​ ಶೆಟ್ಟಿ ಸನ್ಮಾನಿಸಿದರು. ಕಿರಣಕುಮಾರ್​ ಬೈಲೂರು, ದಿನಕರ್​ ಶೆಟ್ಟಿ ಹೆರ್ಗ, ಸತ್ಯಾನಂದ ನಾಯಕ್​ ಇದ್ದರು.
Published on

* ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಕರೆ 

* ಉಡುಪಿ ಜಿಲ್ಲಾ ಕಾರ್ಯ ತಂಡದ ಸಭೆ

ಉಡುಪಿ: ಸಮಗ್ರ ರಾಷ್ಟ್ರ ನಿರ್ಮಾಣದಲ್ಲಿ ಸಮರ್ಪಿಸಿಕೊಂಡಿರುವ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿರುವ ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನಾ ದಿನ ಕಾರ್ಯಕ್ರಮ ಏ.6ರಂದು ನಡೆಯಲಿದೆ. ಜಿಲ್ಲಾದ್ಯಂತ ಸಂಭ್ರಮದಿಂದ ಆಚರಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಕರೆ ನೀಡಿದರು.
ಉಡುಪಿಯ ಜಿಲ್ಲಾ ಕಚೇರಿಯಲ್ಲಿ ಗುರುವಾರ (ಏ.2) ಆಯೋಜಿಸಿದ್ದ ಜಿಲ್ಲಾ ಕಾರ್ಯ ತಂಡದ ಸಭೆ ಹಾಗೂ ಮಂಗಳೂರು ವಿಭಾಗದ ನೂತನ ಪ್ರಭಾರಿಯಾಗಿ ನೇಮಕಗೊಂಡ ಭಾರತೀಶ್​ ಕೊಡಗು ಅವರನ್ನು ಜಿಲ್ಲಾ ಬಿಜೆಪಿ ವತಿಯಿಂದ ಸನ್ಮಾನಿಸಿ ಮಾತನಾಡಿದರು.

ಮನೆಯ ಮೇಲೆ ಬಿಜೆಪಿಯ ಧ್ವಜ ಹಾರಿಸಿ

ಏ.6ರಂದು ಜಿಲ್ಲೆಯ ಎಲ್ಲ 1,112 ಬೂತ್​ಗಳ ಅಧ್ಯಕ್ಷರು ಹಾಗೂ ಪಕ್ಷದ ಪ್ರತಿ ಕಾರ್ಯಕರ್ತನೂ ತನ್ನ ಮನೆಯ ಮೇಲೆ ಬಿಜೆಪಿಯ ಧ್ವಜ ಹಾರಿಸಬೇಕು. ಬೂತ್​ ಸಮಿತಿ ಸಭೆ ಆಯೋಜಿಸಬೇಕು. ಪಕ್ಷದ ಸ್ಥಾಪನೆ, ಇತಿಹಾಸ ಮತ್ತು ಸಾಧನೆಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮ ಆಯೋಜಿಸಿ, ಪಕ್ಷದ ಹಿರಿಯರನ್ನು ಗೌರವಿಸಿ, ಭಾವನಾತ್ಮಕವಾಗಿ ಸ್ಥಾಪನಾ ದಿನ ಆಚರಿಸಬೇಕು. ಅಲ್ಲದೆ, ಏ.14ರಂದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್​ ಅಂಬೇಡ್ಕರ್​ ಜಯಂತಿಯನ್ನು ಜಿಲ್ಲೆಯ ಎಲ್ಲ ಬೂತ್​ ಗಳಲ್ಲಿ ವ್ಯವಸ್ಥಿತವಾಗಿ ಆಚರಿಸಬೇಕು ಎಂದು ಸಲಹೆ ನೀಡಿದರು.
ಮಂಗಳೂರು ವಿಭಾಗ ಪ್ರಭಾರಿ ಭಾರತೀಶ್​ ಕೊಡಗು ಎಸ್​ಐಆರ್​ ಅಭಿಯಾನ, ಪ್ರಶಿಕ್ಷಣ ವರ್ಗ ಸಹಿತ ಪಕ್ಷದ ಸಂಘಟನಾತ್ಮಕ ವಿಚಾರಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್​ ನಾಯಕ್​ ಮಂಡಲವಾರು ಸಂಘಟನಾತ್ಮಕ ಚಟುವಟಿಕೆಗಳ ವರದಿ ಸಂಗ್ರಹಿಸಿದರು.
ಪಕ್ಷದ ಪ್ರಮುಖರು, ಬಿಜೆಪಿ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಚಾಲಕರು, ಬಿಎಲ್​ಎ ಮತ್ತು ಪ್ರಶಿಕ್ಷಣ ತಂಡದ ಸದಸ್ಯರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಕೋಷ್ಠಗಳ ಸಹ ಸಂಯೋಜಕ ಶಂಕರ್​ ಅಂಕದಕಟ್ಟೆ ವಂದೇ ಮಾತರಂ ಗೀತೆ ಹಾಡಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿರಣಕುಮಾರ್​ ಬೈಲೂರು ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ್​ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಉಮೇಶ್​ ಎ. ನಾಯ್ಕ್​ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net