'ವಿಶ್ವ ಗುರು ಭಾರತ'ವೇ ಬಿಜೆಪಿ ಗುರಿ

ಉಡುಪಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪದಗ್ರಹಣ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಿಗೆ ನಿಯುಕ್ತಿ ಪತ್ರ ವಿತರಿಸಲಾಯಿತು. ಕುತ್ಯಾರು ನವೀನ್​ ಶೆಟ್ಟಿ, ಶ್ರೀಕಾಂತ್​ ನಾಯಕ್​, ರುಡಾಲ್ಫ್​ ಡಿಸೋಜಾ, ಸಲೀಂ ಅಂಬಾಗಿಲು, ಶೇಕ್​ ಆಸೀಫ್​ ಕಟಪಾಡಿ, ಮಹಮ್ಮದ್​ ಅಪ್ಸರ್​ ಉಚ್ಚಿಲ, ಶಿವಕುಮಾರ್​ ಅಂಬಲಪಾಡಿ, ಚಿರಂಜೀವಿ ಜೈನ್​ ಇತರರಿದ್ದರು.
ಉಡುಪಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪದಗ್ರಹಣ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಿಗೆ ನಿಯುಕ್ತಿ ಪತ್ರ ವಿತರಿಸಲಾಯಿತು. ಕುತ್ಯಾರು ನವೀನ್​ ಶೆಟ್ಟಿ, ಶ್ರೀಕಾಂತ್​ ನಾಯಕ್​, ರುಡಾಲ್ಫ್​ ಡಿಸೋಜಾ, ಸಲೀಂ ಅಂಬಾಗಿಲು, ಶೇಕ್​ ಆಸೀಫ್​ ಕಟಪಾಡಿ, ಮಹಮ್ಮದ್​ ಅಪ್ಸರ್​ ಉಚ್ಚಿಲ, ಶಿವಕುಮಾರ್​ ಅಂಬಲಪಾಡಿ, ಚಿರಂಜೀವಿ ಜೈನ್​ ಇತರರಿದ್ದರು.
Published on

* ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಅಭಿಪ್ರಾಯ

* ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪದಗ್ರಹಣ

ಉಡುಪಿ: ಚುನಾವಣೆಗಳನ್ನು ಗೆಲ್ಲುವುದಷ್ಟೇ ಬಿಜೆಪಿಯ ಉದ್ದೇಶವಲ್ಲ. ರಾಷ್ಟ್ರೀಯ ವಿಚಾರಧಾರೆಯ ಮೂಲಕ ದೇಶ ಮೊದಲು ಎಂಬ ಚಿಂತನೆಯೊಂದಿಗೆ ಭಯಮುಕ್ತ ರಾಷ್ಟ್ರ ನಿಮಾರ್ಣ, ವಿಕಸಿತ ಭಾರತ ಪರಿಕಲ್ಪನೆಯೊಂದಿಗೆ 'ವಿಶ್ವ ಗುರು ಭಾರತ' ಆಗಬೇಕೆನ್ನುವುದೇ ಬಿಜೆಪಿ ಗುರಿಯಾದೆ. ಆ ನಿಟ್ಟಿನಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಪದಾಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಅವರ 'ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್​ ತತ್ವದಡಿ ಸದೃಢವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಕರೆ ನೀಡಿದರು.
ಉಡುಪಿ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರುಡಾಲ್ಫ್​ ಡಿಸೋಜಾ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ, ನಿಯುಕ್ತಿ ಪತ್ರ ವಿತರಿಸಿ ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್​ ನಾಯಕ್​ ಮಾತನಾಡಿ ಪಕ್ಷದ ಸಭೆಗಳು, ಪದಾಧಿಕಾರಿಗಳ ಜವಾಬ್ದಾರಿ ಮತ್ತು ಸಂಘಟನಾತ್ಮಕ ವಿಚಾರಗಳ ಕುರಿತು ಮಾಹಿತಿ ನೀಡಿದರು. ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಮಾಜಿ ಕಾರ್ಯದರ್ಶಿ ಸಲೀಂ ಅಂಬಾಗಿಲು ಮಾತನಾಡಿದರು. ಮೋರ್ಚಾದ ಪದಾಧಿಕಾರಿಗಳು ಅನಿಸಿಕೆ ಹಂಚಿಕೊಂಡರು.
ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶೇಕ್​ ಆಸೀಫ್​ ಕಟಪಾಡಿ, ಮಹಮ್ಮದ್​ ಅಪ್ಸರ್​ ಉಚ್ಚಿಲ, ಪದಾಧಿಕಾರಿಗಳು ಮತ್ತು ಕಾರ್ಯಕಾರಿಣಿ ಸದಸ್ಯರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್​ ಅಂಬಲಪಾಡಿ ಗೀತೆ ಹಾಡಿದರು. ಮೋರ್ಚಾದ ಉಪಾಧ್ಯಕ್ಷ ಚಿರಂಜೀವಿ ಜೈನ್​ ಸ್ವಾಗತಿಸಿದರು. ಕೋಶಾಧಿಕಾರಿ ಗ್ಲೆನ್​ ಮೋನಿಸ್​ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಮೈಕಲ್​ ಡಿಸೋಜ ವಂದಿಸಿದರು.
"

ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ನೇತೃತ್ವದಲ್ಲಿ ಧರ್ಮ ಗುರುಗಳು, ಧರ್ಮ ಭಗಿನಿಯರು ಮತ್ತು ಸಮುದಾಯದ ಪ್ರಮುಖರ ಸಮಾಗಮದೊಂದಿಗೆ ಆಯೋಜಿಸಿರುವ 'ಮನ್​ ಕೀ ಬಾತ್​' ರಾಜ್ಯ ಮಟ್ಟದ ನೇರ ಪ್ರಸಾರ ವೀಕ್ಷಣೆ ಕಾರ್ಯಕ್ರಮವು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆ ಪಡೆದಿದೆ. ಇಂತಹ ಮಾದರಿ ಕಾರ್ಯಕ್ರಮ ನಿರಂತರ ನಡೆಯುವ ಮೂಲಕ ರಾಷ್ಟ್ರೀಯ ವಿಚಾರಗಳು ಎಲ್ಲೆಡೆ ಪಸರಿಸುವಂತಾಗಬೇಕು.

— ಕುತ್ಯಾರು ನವೀನ್​ ಶೆಟ್ಟಿ. ಬಿಜೆಪಿ ಜಿಲ್ಲಾಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net