ಆರೋಗ್ಯ ವಲಯಕ್ಕೆ ಕ್ಷಯ ರೋಗ ಸವಾಲು

ಉಡುಪಿಯಲ್ಲಿ ಆಯೋಜಿಸಿದ್ದ ವಿಶ್ವ ಕ್ಷಯರೋಗ ನಿಯಂತ್ರಣ ದಿನವನ್ನು ಮನು ಪಟೇಲ್​ ಬಿ.ವೈ. ಉದ್ಘಾಟಿಸಿದರು. ಡಾ. ಬಸವರಾಜ ಜಿ. ಹುಬ್ಬಳ್ಳಿ, ಡಾ.ಚಿದಾನಂದ ಸಂಜು, ಡಾ.ಲತಾ ನಾಯಕ್​, ಡಾ. ಜೋತ್ಸ್ನಾ ಬಿ.ಕೆ., ಡಾ.ವಾಸುದೇವ್​ ಇತರರಿದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ವಿಶ್ವ ಕ್ಷಯರೋಗ ನಿಯಂತ್ರಣ ದಿನವನ್ನು ಮನು ಪಟೇಲ್​ ಬಿ.ವೈ. ಉದ್ಘಾಟಿಸಿದರು. ಡಾ. ಬಸವರಾಜ ಜಿ. ಹುಬ್ಬಳ್ಳಿ, ಡಾ.ಚಿದಾನಂದ ಸಂಜು, ಡಾ.ಲತಾ ನಾಯಕ್​, ಡಾ. ಜೋತ್ಸ್ನಾ ಬಿ.ಕೆ., ಡಾ.ವಾಸುದೇವ್​ ಇತರರಿದ್ದರು.
Published on

* ನ್ಯಾಯಾಧೀಶ ಮನು ಪಟೇಲ್​ ಬಿ.ವೈ. ಆತಂಕ

* ನೂರು ದಿನಗಳ ಅಭಿಯಾನ ಉದ್ಘಾಟನೆ

ಉಡುಪಿ: ರೋಗಿಗಳಿಗೆ ಮರಣ ತರುವ ಗಂಭೀರ ಕಾಯಿಲೆಗಳಲ್ಲಿ ದೇಶದಲ್ಲಿಯೇ ಕ್ಷಯರೋಗ ಮೊದಲನೇ ಸ್ಥಾನದಲ್ಲಿದೆ. ಈ ರೋಗವು ಸಾರ್ವಜನಿಕ ಆರೋಗ್ಯ ವಲಯದಲ್ಲಿ ಸವಾಲು ಒಡ್ಡುತ್ತಿದ್ದು ಆತಂಕ ಹೆಚ್ಚಿಸುತ್ತಿದೆ. ಕ್ಷಯರೋಗ ಶಾಶ್ವತ ನಿಮೂರ್ಲನೆಯ ಸಂಕಲ್ಪದೊಂದಿಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಉಡುಪಿಯನ್ನು ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಬೇಕು ಎಂದು ಹಿರಿಯ ಸಿವಿಲ್​ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್​ ಬಿ.ವೈ. ಸಲಹೆ ನೀಡಿದರು.
ಉಡುಪಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಶ್ರೀಕೃಷ್ಣ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಮಂಗಳವಾರ (ಮಾ.24) ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಶ್ವ ಕ್ಷಯ ರೋಗ ನಿಯಂತ್ರಣ ದಿನಾಚರಣೆ, ಕ್ಷಯಮುಕ್ತ ಗ್ರಾಪಂಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಕ್ಷಯಮುಕ್ತ ಭಾರತ್​ 100 ದಿನಗಳ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 1,500 ಪ್ರಕರಣ ಪತ್ತೆ

ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಚಿದಾನಂದ ಸಂಜು ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಕ್ಷಯ ಪತ್ತೆ ಹಚ್ಚಲು 3 ಸಿಬಿನ್ಯಾಟ್​ ಯಂತ್ರ, 8 ಟ್ರುನ್ಯಾಟ್​ ಯಂತ್ರಗಳಿದ್ದು ಪ್ರತಿವರ್ಷ 40ರಿಂದ 45 ಸಾವಿರ ಜನರ ಪರೀಕ್ಷೆ ಮಾಡಲಾಗುತ್ತಿದೆ. ಈ ಬಾರಿ ಸುಮಾರು 1,500 ಪ್ರಕರಣ  ಪತ್ತೆ ಮಾಡಲಾಗಿದ್ದು, ಅವುಗಳಲ್ಲಿ 500ಕ್ಕೂ ಹೆಚ್ಚು ಪ್ರಕರಣ ಹೊರ ಜಿಲ್ಲೆಗೆ ಸಂಬಂಧಿಸಿದ್ದು ಅವರಿಗೂ ಚಿಕಿತ್ಸೆ ನೀಡಲಾಗಿದೆ. ಮರಣ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ಷಯ ಲಕ್ಷಣ ಹೊಂದಿರುವವರನ್ನು ಮುಂಚಿತವಾಗಿಯೇ ಪತ್ತೆ ಹಚ್ಚಲು ಕೇಂದ್ರ ಸರ್ಕಾರ ಎಲ್ಲ ಜಿಲ್ಲೆಗಳಿಗೂ ಅಂಡ್ರಾಯ್ಡ್​ ಎಕ್ಸರೇ ಯಂತ್ರ ನೀಡಿದೆ ಎಂದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮ ರಾವ್​, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್​ ಭಟ್​, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಲತಾ ನಾಯಕ್​, ಜಿಲ್ಲಾ ಆರ್​ಸಿಎಚ್​ ಅಧಿಕಾರಿ ಡಾ. ಜೋತ್ಸ್ನಾ ಬಿ.ಕೆ., ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ್​, ವಿವಿಧ ಗ್ರಾಪಂಗಳ ಪಿಡಿಒಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಪ್ರಶಾಂತ್​ ಶೆಟ್ಟಿ ಸ್ವಾಗತಿಸಿದರು. ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಆಲಂದೂರು ಮಂಜುನಾಥ ಎಸ್​. ಗಾಣಿಗ ನಿರೂಪಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್​ ಜೈನ ವಂದಿಸಿದರು.

20 ಗ್ರಾಪಂಗಳಿಗೆ ಚಿನ್ನದ ಪದಕ

ಪ್ರಸಕ್ತ ಸಾಲಿನಲ್ಲಿ ಕ್ಷಯಮುಕ್ತ ಗ್ರಾಪಂ ಎಂದು ಆಯ್ಕೆ ಮಾಡಲಾದ 64 ಗ್ರಾಪಂಗಳಲ್ಲಿ 18 ಗ್ರಾಪಂಗೆ  ಕಂಚಿನ ಪದಕ, 26 ಗ್ರಾಪಂಗೆ ಬೆಳ್ಳಿ ಪದಕ ಹಾಗೂ 20 ಗ್ರಾಪಂಗಳಿಗೆ ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
"

ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಕ್ಷಯ ತಪಾಸಣೆಗೆ ಮನೆ ಮನೆ ಭೇಟಿ ನೀಡಿದಾಗ ಆಯಾ ವ್ಯಾಪ್ತಿಯ ಪಿಡಿಒಗಳು ಅಗತ್ಯ ಸಹಕಾರ ನೀಡಬೇಕು, ಕ್ಷಯ ಬಾಧಿಸಬಹುದಾದ ಹಳ್ಳಿಗಳಲ್ಲಿ, ದುರ್ಬಲ ಜನಾಂಗದವರು ವಾಸಿಸುವ ಜನವಸತಿ ಪ್ರದೇಶಗಳಲ್ಲಿ ಟಿಬಿ ಸ್ಕ್ರೀನಿಂಗ್​ ನಡೆಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net