ತರಬೇತಿಗಳಿಂದ ಸೃಜನಶೀಲತೆ ಬೆಳಕಿಗೆ: ಬಸ್ರೂರು ರಾಜೀವ ಶೆಟ್ಟಿ

ಭಾರತೀಯ ರೆಡ್​ಕ್ರಾಸ್​ ಕರ್ನಾಟಕ ಘಟಕದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ  ಉದ್ಘಾಟಿಸಿದರು.
ಭಾರತೀಯ ರೆಡ್​ಕ್ರಾಸ್​ ಕರ್ನಾಟಕ ಘಟಕದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಉದ್ಘಾಟಿಸಿದರು.
Published on
ಉಡುಪಿ: ಪ್ರತಿಯೊಬ್ಬ ವ್ಯಕ್ತಿಯಲ್ಲಿ ಸೃಜನಶೀಲತೆ ಅಂತರ್ಗತವಾಗಿರುತ್ತದೆ. ಈ ಶಕ್ತಿ ಬೆಳಕಿಗೆ ಬರಲು ಪರಿಣಾಮಕಾರಿ ತರಬೇತಿ ಅಗತ್ಯವಾಗಿದೆ. ಇದರಿಂದ ಅನುಭವ ಪಕ್ವಗೊಳ್ಳುತ್ತದೆ ಎಂದು ಭಾರತೀಯ ರೆಡ್​ಕ್ರಾಸ್​ ಕರ್ನಾಟಕ ಘಟಕದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಭಾರತೀಯ ರೆಡ್​ಕ್ರಾಸ್​ ಘಟಕ ಸಂಯುಕ್ತ ಆಶ್ರಯದಲ್ಲಿ ನಡೆದ ವ್ಯಕ್ತಿ ವಿಕಸನ ಕುರಿತ ಜಿಲ್ಲಾ ಮಟ್ಟದ ತರಬೇತಿ ಶಿಬಿರ ಉದ್ಘಾಟಿಸಿ ಮಾತಾನಾಡಿದರು.

ಸಭೆಯ ಅಧ್ಯಕ್ಷತೆಯನ್ನು ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಪ್ರಾಂಶುಪಾಲ ಪ್ರೊ. ನಿತ್ಯಾನಂದ ಗಾಂವ್ಕರ್​ ವಹಿಸಿದ್ದರು.
ರೆಡ್​ಕ್ರಾಸ್​ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಪ್ರಸ್ತಾವಿಕವಾಗಿ ಮಾತಾನಾಡಿದರು. ಡಾ. ವಿವೇಕಾನಂದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ರೆಡ್​ಕ್ರಾಸ್​ನ ಆಡಳಿತ ಮಂಡಳಿಯ ಸದಸ್ಯ ಟಿ. ಚಂದ್ರಶೇಖರ್​ ಅತಿಥಿಗಳಾಗಿದ್ದರು. ಹುಬ್ಬಳ್ಳಿ ಎಸಿಟಿ ಕೇಂದ್ರ ಮುಖ್ಯಸ್ಥ ಯಶವಂತಿ ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್​ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಪ್ರೇಮಾ ಮತ್ತು ರಾಧಿಕಾ ಪ್ರಾರ್ಥಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net