ಸ್ಪರ್ಧೆಗಳಿಂದ ಭಜನಾ ತಂಡಗಳಿಗೆ ಉತ್ತೇಜನ: ವಾದಿರಾಜ ಭಟ್

 ಕರ್ಣಾಟಕ ಬ್ಯಾಂಕ್​ ಡಿಜಿಎಂ ವಾದಿರಾಜ ಭಟ್ ಭಜನಾ ಸ್ಪರ್ಧೆ ಉದ್ಘಾಟಿಸಿದರು.
ಕರ್ಣಾಟಕ ಬ್ಯಾಂಕ್​ ಡಿಜಿಎಂ ವಾದಿರಾಜ ಭಟ್ ಭಜನಾ ಸ್ಪರ್ಧೆ ಉದ್ಘಾಟಿಸಿದರು.
Published on
ಉಡುಪಿ: ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಭಜನೆ ಮಾಡುವ ಸಂಪ್ರದಾಯ ವಿರಳವಾಗುತ್ತಿದ್ದು, ಭಜನಾ ಮಂಡಳಿಗಳಿಂದಾಗಿ ಈ ಪರಂಪರೆ ಉಳಿದಿದೆ. ಸ್ಪರ್ಧೆಗಳ ಮೂಲಕ ಭಜನಾ ತಂಡಗಳಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಕರ್ಣಾಟಕ ಬ್ಯಾಂಕ್​ ಡಿಜಿಎಂ ವಾದಿರಾಜ ಭಟ್​ ಹೇಳಿದರು.

ಜಿಲ್ಲಾ ಯುವ ಬ್ರಾಹ್ಮಣ ಪರಿಷತ್​ ಆಶ್ರಯದಲ್ಲಿ ಗುಂಡಿಬೈಲು ಬ್ರಾಹ್ಮಿ ಸಭಾಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಭೀಮ ಜುವೆಲ್ಲರಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಜಿ. ರಾಘವೇಂದ್ರ ಭಟ್​, ಪರಿಷತ್​ ಅಧ್ಯಕ್ಷ ರಘುಪತಿ ರಾವ್​, ಮಾಜಿ ಅಧ್ಯಕ್ಷ ಚಂದ್ರಕಾಂತ್​, ಅಮಿತಾ ಕ್ರಮಧಾರಿ, ಉಷಾ ಹೆಬ್ಬಾರ್​, ಪರಿಷತ್​ ಮಾಜಿ ಅಧ್ಯಕ್ಷ ವಿಷ್ಣು ಪಾಡಿಗಾರ್​ ಉಪಸ್ಥಿತರಿದ್ದರು. ಅಕ್ಷತಾ ರಾವ್​ ಮತ್ತು ವೆಂಕಟೇಶ್​ ರಾವ್​ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಸ್ಪರ್ಧೆಯಲ್ಲಿ 28 ತಂಡಗಳು ಭಾಗವಹಿಸಿದ್ದು, ಪುರುಷ, ಮಹಿಳೆ ಮತ್ತು ಮಕ್ಕಳ ಮೂರು ವಿಭಾಗದಲ್ಲಿ ಪ್ರಥಮ 15,000, ದ್ವೀತಿಯ 10000, ತೃತೀಯ 5 ಸಾವಿರ ಬಹುಮಾನ ನೀಡಿ ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net