ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಉಪ ಮಹಾಪ್ರಬಂಧಕ ಮಹಾಮಾಯಪ್ರಸಾದ್ ಮಾತನಾಡಿ, ಕಳೆದ ಸಾಲಿನಲ್ಲಿ ಜಿಲ್ಲೆಗೆ ಆದ್ಯತೆಯ ಮತ್ತು ಆದ್ಯತೆಯೇತರ ವಲಯಗಳಿಗೆ ಒಟ್ಟಾರೆಯಾಗಿ 15,514.08 ಕೋಟಿ ರೂ. ವಾರ್ಷಿಕ ಕ್ರೆಡಿಟ್ ಯೋಜನೆ ಗುರಿ ನಿಗದಿಪಡಿಸಲಾಗಿದೆ. 2026ರ ಮಾರ್ಚ್ ಅಂತ್ಯದವರೆಗೆ 17,191.28 ಗುರಿ ಸಾಧಿಸಿ, ಶೇ. 110.81 ಸಾಧನೆ ಮಾಡಲಾಗಿದೆ. ಕೃಷಿ ವಲಯದಲ್ಲಿ 4230.28 ನಿಗದಿತ ಗುರಿಗೆ 4738.22 ಗುರಿ ಸಾಧಿಸಿ ಶೇ.112.01, ಎಂಎಸ್ಎಂಇ ವಲಯಕ್ಕೆ 3712.58 ನಿಗದಿತ ಗುರಿಗೆ 3709.94 ಗುರಿ ಸಾಧಿಸಿ ಶೇ.99.93ರಷ್ಟು, ಶಿಕ್ಷಣ ವಲಯದಲ್ಲಿ 187.07 ನಿಗದಿತ ಗುರಿಗೆ 168.75 ಗುರಿ ಸಾಧಿಸಿ ಶೇ.90.21ರಷ್ಟು, ವಸತಿ ಕ್ಷೇತ್ರಗಳಿಗೆ 510 ನಿಗದಿತ ಗುರಿಗೆ 270.92 ಗುರಿ ಸಾಧಿಸಿ ಶೇ.53.12ರಷ್ಟು, ಇನ್ನಿತರ ಕ್ಷೇತ್ರಗಳಿಗೆ 395.31 ನಿಗದಿತ ಗುರಿಗೆ 407.77 ಗುರಿ ಸಾಧಿಸಿ ಶೇ.103.15, ಆದ್ಯತೇತರ ವಲಯಗಳಿಗೆ 6474.31 ನಿಗದಿತ ಗುರಿಗೆ 7890.36 ಗುರಿ ಸಾಧಿಸಿ ಶೇ.121.87ರಷ್ಟು ಸಾಧನೆ ಮಾಡಲಾಗಿದೆ ಎಂದು ವಿವರಿಸಿದರು.