ನ್ಯಾಯಕ್ಕಾಗಿ ಹೋರಾಡಿದರೆ ಎಫ್ಐಆರ್​ ಏಕೆ?

ಕೇಂದ್ರ ಬಿಜೆಪಿ ಸರ್ಕಾರ ಜಾತಿ ತಾರತಮ್ಯ ನೀತಿ ವಿರೋಧಿಸಿ ಹಾಗೂ ರಾಹುಲ್​ ಗಾಂಧಿ ವಿರುದ್ಧದ ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿ ಉಡುಪಿಯಲ್ಲಿ ಜಿಲ್ಲಾ ಕಾಂಗ್ರೆಸ್​ ಸಮಿತಿ ಪ್ರತಿಭಟಿಸಿತು. ಎಂ.ಎ. ಗಫೂರ್​, ವೆರೋನಿಕಾ ಕರ್ನೇಲಿಯೋ, ಗೀತಾ ವಾಗ್ಳೆ, ಜ್ಯೋತಿ ಹೆಬ್ಬಾರ್​, ರಮೇಶ್​ ಕಾಂಚನ್​, ಪ್ರಖ್ಯಾತ್​ ಶೆಟ್ಟಿ ಇತರರಿದ್ದರು.
ಕೇಂದ್ರ ಬಿಜೆಪಿ ಸರ್ಕಾರ ಜಾತಿ ತಾರತಮ್ಯ ನೀತಿ ವಿರೋಧಿಸಿ ಹಾಗೂ ರಾಹುಲ್​ ಗಾಂಧಿ ವಿರುದ್ಧದ ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿ ಉಡುಪಿಯಲ್ಲಿ ಜಿಲ್ಲಾ ಕಾಂಗ್ರೆಸ್​ ಸಮಿತಿ ಪ್ರತಿಭಟಿಸಿತು. ಎಂ.ಎ. ಗಫೂರ್​, ವೆರೋನಿಕಾ ಕರ್ನೇಲಿಯೋ, ಗೀತಾ ವಾಗ್ಳೆ, ಜ್ಯೋತಿ ಹೆಬ್ಬಾರ್​, ರಮೇಶ್​ ಕಾಂಚನ್​, ಪ್ರಖ್ಯಾತ್​ ಶೆಟ್ಟಿ ಇತರರಿದ್ದರು.
Published on

* ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಎಂ.ಎ. ಗಫೂರ್​ ಆಕ್ರೋಶ

* ಉಡುಪಿಯ ಬ್ರಹ್ಮಗಿರಿಲ್ಲಿ ಜಿಲ್ಲಾ ಕಾಂಗ್ರೆಸ್​ ಸಮಿತಿ ಪ್ರತಿಭಟನೆ

ಉಡುಪಿ: ದೇಶದಲ್ಲಿ ಯಾರು ನ್ಯಾಯದ ಪರವಾಗಿ, ಅಗತ್ಯವಿರುವ ಬೇಡಿಕೆ ಈಡೇರಿಸುವಂತೆ ಪ್ರತಿಭಟಿಸುತ್ತಾರೋ ಅವರ ವಿರುದ್ಧವೇ ಕೇಸ್​ ದಾಖಲಿಸುವ ಕೆಟ್ಟ ಸಂಸ್ಕೃತಿಯನ್ನು ಕೇಂದ್ರ ಬಿಜೆಪಿ ಸರ್ಕಾರ ಅನುಸರಿಸುತ್ತಿದೆ. ಉತ್ತರಾಖಂಡ್​ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದ ಜಾಗವನ್ನು ಗಂಗಾಜಲದಿಂದ ಶುದ್ಧೀಕರಣ ಮಾಡಿರುವುದು ಅಸಹನೀಯ. ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಲಿದೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್​ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಜಾತಿ ತಾರತಮ್ಯದ ವಿರುದ್ಧ ಹಾಗೂ ರಾಹುಲ್​ ಗಾಂಧಿ ಮೇಲೆ ಹಾಕಿರುವ ಕೇಸ್​ ಹಿಂಪಡೆಯುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್​ ವತಿಯಿಂದ ಬ್ರಹ್ಮಗಿರಿ ಸರ್ಕಲ್​ನಲ್ಲಿ ಮಂಗಳವಾರ (ಸೆ.1) ಸಂಜೆ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ

ಯಾರು ಸ್ಥಳ ಶುಧ್ಧೀಕರಣ ಮಾಡಿದ್ದಾರೋ ಅವರ ವಿರುದ್ಧ ಎಸ್​ಸಿ, ಎಸ್​ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಕ್ರಮ ಕೈಗೊಳ್ಳಲೇಬೇಕು. ರಾಹುಲ್​ ಗಾಂಧಿ ಅವರನ್ನು ದಮನಿಸಲು ಬಿಜೆಪಿ ನಾಯಕರು ಎಲ್ಲ ರೀತಿಯ ಕಾರ್ಯ ಮಾಡುತ್ತಿದ್ದಾರೆ. ರಾಜಕೀಯವಾಗಿ ಬೆಳೆಯುತ್ತಿರುವ ಅವರನ್ನು ಅವಮಾನಿಸುತ್ತಲೇ ಇದ್ದಾರೆ. ಇದೀಗ ಅವರ ವಿರುದ್ಧವೇ ದಲಿತರ ವಿರುದ್ಧ ಮಾತನಾಡಿದ್ದಾರೆಂದು ಎಫ್ಐಆರ್​ ದಾಖಲಿಸಿರುವುದು ಖಂಡನೀಯ. ಸಂವಿಧಾನ ಉಳಿಸಿ, ಸಾಮಾಜಿಕ ನ್ಯಾಯ ರಕ್ಷಿಸಬೇಕಿದೆ ಎಂದರು.
ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೇಲಿಯೋ, ಕೆಪಿಸಿಸಿ ಸದಸ್ಯೆ ಗೀತಾ ವಾಗ್ಳೆ, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್​ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ರಮೇಶ್​ ಕಾಂಚನ್​, ಗಣನಾಥ್​ ಶೆಟ್ಟಿ ಎಕ್ಕಾರು, ಬಿ.ನರಸಿಂಹಮೂರ್ತಿ, ಜಿಲ್ಲಾ ವಕ್ತಾರ ಭಾಸ್ಕರ್​ ರಾವ್​ ಕಿದಿಯೂರು, ಮಹಾಬಲ ಕುಂದರ್​, ಪ್ರಖ್ಯಾತ್​ ಶೆಟ್ಟಿ, ಗೋಫಿನಾಥ್​ ಭಟ್​, ಸುರೇಶ್​ ಶೆಟ್ಟಿ ಬನ್ನಂಜೆ, ಮೀನಾಕ್ಷಿ ಮಾಧವ ಬನ್ನಂಜೆ, ರೋಶನಿ ಒಲಿವೆರಾ, ಡಾ. ಸುನೀತಾ ಶೆಟ್ಟಿ, ಶಶಿಧರ್​ ಶೆಟ್ಟಿ ಎಲ್ಲೂರು, ಜಯಕುಮಾರ್​, ಕಿಶೋರ್​ ಎಮಾರ್ಳ್​, ಕಿರಣ್​ ಹೆಗಡೆ, ಉದ್ಯಾವರ ನಾಗೇಶಕುಮಾರ್​, ಸದಾನಂದ್​ ಕಾಂಚನ್​, ಗಣೇಶ್​ ನೆರ್ಗಿ, ಗಣೇಶ್​ ಸರಳಬೆಟ್ಟು, ಸತೀಶ್​ ಮಂಚಿ ಇನ್ನಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net