ಸಗ್ರಿ ವಾರ್ಡ್ನ ಬಿ.ಎಲ್.ಒ ಪ್ರಮೋದಾ ಮಾತನಾಡಿ, ಮತದಾರರಿಗೆ ಗಣತಿ ನಮೂನೆಯ ಎರಡೂ ಪ್ರತಿಗಳನ್ನು ನೀಡುತ್ತಿದ್ದೇವೆ. ಮತದಾರರು ಎರಡನ್ನೂ ಭರ್ತಿ ಮಾಡಿ, ನಂತರ ಭಾವಚಿತ್ರ ಅಂಟಿಸಿ, ಸಹಿ ಮಾಡಬೇಕು. ಒಂದು ಪ್ರತಿಯನ್ನು ನಮಗೆ ನೀಡಿ, ಮತ್ತೊಂದು ಪ್ರತಿಯನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ನೋಂದಾಯಿಸಿಕೊಳ್ಳುವವರೆಗೂ ಇದೇ ನಿಯಮ ಅನ್ವಯವಾಗಲಿದೆ ಎಂದರು.